• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Saturday, February 21, 2026
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಅರಣ್ಯ ಹಕ್ಕು ಮರುಪರಿಶೀಲನೆ ಪ್ರಕ್ರಿಯೆ ಸಮರ್ಪಕವಾಗಿರಲಿ: ಜಿಲ್ಲಾಡಳಿತಕ್ಕೆ ಹೋರಾಟ ಸಮಿತಿಯ ಮನವಿ

Kannada News Desk by Kannada News Desk
February 20, 2026
in ಉತ್ತರ ಕನ್ನಡ
0
ಅರಣ್ಯ ಹಕ್ಕು ಮರುಪರಿಶೀಲನೆ ಪ್ರಕ್ರಿಯೆ ಸಮರ್ಪಕವಾಗಿರಲಿ: ಜಿಲ್ಲಾಡಳಿತಕ್ಕೆ ಹೋರಾಟ ಸಮಿತಿಯ ಮನವಿ
0
SHARES
98
VIEWS
WhatsappTelegram Share on FacebookShare on TwitterLinkedin


ಭಟ್ಕಳ: ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅರಣ್ಯ ಹಕ್ಕು ಮತ್ತು ಸ್ಥಳ ಮಹಜರು ಪ್ರಕ್ರಿಯೆಗಳು ನೈಸರ್ಗಿಕ ನ್ಯಾಯದ ತತ್ವಗಳಿಗೆ ಅನುಗುಣವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಮರುಪರಿಶೀಲನೆ ಕಾರ್ಯವನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.


ಭಟ್ಕಳದಲ್ಲಿ ಬುಧವಾರ ನಡೆದ ಅರಣ್ಯ ಭೂಮಿ ಅತೀಕ್ರಮಣದಾರರ ಬೃಹತ್ ಸಭೆಯ ಬಳಿಕ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರಸ್ಕೃತ ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆಗೆ ರಾಜ್ಯ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿ ಜಂಟಿ ಮಹಜರು ಪ್ರಕ್ರಿಯೆ ನಡೆಸಲು ಸೂಚನೆ ನೀಡಿರುವುದನ್ನು ಸ್ವಾಗತಿಸಿದರು. ಹೋರಾಟ ಸಮಿತಿಯ ನಿರಂತರ ಪ್ರಯತ್ನ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಮತ್ತು ಸ್ಥಳೀಯ ಶಾಸಕರ ಸಹಕಾರದಿಂದ ಈ ಆದೇಶ ಹೊರಬಂದಿದೆ ಎಂದು ತಿಳಿಸಿದರು.


ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಳೆದ ವಾರದಿಂದ ಹಲವು ಪ್ರದೇಶಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆಗಳು ಆರಂಭವಾಗಿದ್ದರೂ, ಕೆಲವು ಕಡೆಗಳಲ್ಲಿ ಅವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು. ಅಲ್ಪ ಪ್ರಮಾಣದ ಮಾಲ್ಕಿ ಹಿಡುವಳಿ ಇರುವ ಪ್ರಕರಣಗಳಲ್ಲಿಯೂ ಮಹಜರು ನಡೆಸದಂತೆ ಮೌಖಿಕ ಸೂಚನೆಗಳಿವೆ ಎಂಬ ಆರೋಪವೂ ಕೇಳಿಬಂದಿದ್ದು, ಇದರಿಂದ ಅರಣ್ಯವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದರು.ಪ್ರಸ್ತುತ ಜಿಲ್ಲೆಯಲ್ಲಿ 67,226 ತಿರಸ್ಕೃತ ಹಾಗೂ 16,093 ಪರಿಶೀಲನೆ ಬಾಕಿ ಇರುವ ಅರ್ಜಿಗಳು ಸೇರಿ ಒಟ್ಟು 83,319 ಅರ್ಜಿಗಳು ಮರುಪರಿಶೀಲನೆಗಾಗಿ ಬಾಕಿಯಿವೆ. ಈ ವ್ಯಾಪಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಠ ಆರು ತಿಂಗಳ ಅವಧಿಯೂ ಸಾಕಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದ್ದರಿಂದ ಮರುಪರಿಶೀಲನೆ ಕಾರ್ಯಕ್ಕೆ ಕನಿಷ್ಠ ಆರು ತಿಂಗಳ ಅವಧಿ ವಿಸ್ತರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.ಅರಣ್ಯ ಹಕ್ಕು ನಿಯಮ 13ರಲ್ಲಿ ಉಲ್ಲೇಖಿಸಿರುವ ಪುರಾವೆಗಳ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಿ, ನೈಜ ಸಾಗುವಳಿ ಪ್ರದೇಶವನ್ನು ಗುರುತಿಸುವುದು ಅತ್ಯಂತ ಮುಖ್ಯ. ಮಹಜರು ಪ್ರಕ್ರಿಯೆ ಕೇವಲ ಔಪಚಾರಿಕ ಕ್ರಮವಾಗದೆ, ಅರ್ಹ ಅರಣ್ಯವಾಸಿಗಳಿಗೆ ಭೂಹಕ್ಕು ನೀಡುವ ದಿಸೆಯಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಕೊಚರೇಕರ ಹೇಳಿದರು. ರಾಜ್ಯ ಮಟ್ಟದ ನಿರ್ದೇಶನಗಳಂತೆ ಯಾರೂ ಭೂಹಕ್ಕಿನಿಂದ ವಂಚಿತರಾಗದಂತೆ ಆಡಳಿತ ಇಚ್ಛಾಶಕ್ತಿ ತೋರಬೇಕು ಎಂಬ ಆಶಯ ವ್ಯಕ್ತಪಡಿಸಿದರು.


ಜಿಲ್ಲಾ ಜನಪರ ವೇದಿಕೆಯ ಅಧ್ಯಕ್ಷ ಡಾ. ನಾಗೇಶ ನಾಯ್ಕ ಮಾತನಾಡಿ, ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ ಆದೇಶ ಹೊರಬಂದಿರುವುದು ಜಿಲ್ಲೆಯ ಮಟ್ಟಿಗೆ ಮಹತ್ವದ ಬೆಳವಣಿಗೆ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನೀಡುವ ಮಹಜರು ದೃಢೀಕರಣ ಅರಣ್ಯವಾಸಿಗಳ ಬದುಕಿಗೆ ಭದ್ರತೆ ಒದಗಿಸುವಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅರಣ್ಯ ಹಕ್ಕು ಕಾಯ್ದೆಯಡಿ ನೆರೆಯ ಆಂಧ್ರಪ್ರದೇಶದಲ್ಲಿ ಶೇ.79 ಹಾಗೂ ಕೇರಳದಲ್ಲಿ ಶೇ.65ರಷ್ಟು ಅರ್ಹರಿಗೆ ಭೂಅಧಿಭೋಗ ಹಕ್ಕು ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಈ ಪ್ರಮಾಣ ಶೇ.4ರಷ್ಟೇ ಇರುವುದನ್ನು ಅವರು ವಿಷಾದಿಸಿದರು.


ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಜಿಲ್ಲೆಯಲ್ಲಿನ ಅರಣ್ಯ ಹಕ್ಕು ಹೋರಾಟವು ಸಕ್ರಿಯ ಹಂತದಲ್ಲಿದ್ದು, ಅರ್ಹರಿಗೆ ನ್ಯಾಯ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮರುಪರಿಶೀಲನಾ ಪ್ರಕ್ರಿಯೆ ಕುರಿತು ಅರಣ್ಯ ಅತೀಕ್ರಮಣದಾರರಿಗೆ ಅಗತ್ಯ ಮಾಹಿತಿ ನೀಡಲಾಗಿದೆ ಎಂದರು.ಸಭೆಯಲ್ಲಿ ಇನಾಯತುಲ್ ಶಾಬಂದ್ರಿ, ಎಂ.ಡಿ. ನಾಯ್ಕ, ಗಣಪತಿ ನಾಯ್ಕ ಜಾಲೀ, ಎ.ಎಂ. ಮುಲ್ಲಾ, ಈಶ್ವರ ನಾಯ್ಕ, ಖಯೂಂ ಸಾಬ್, ಶ್ರೀಧರ ಶೆಟ್ಟಿ, ಪಾಂಡುರಂಗ ನಾಯ್ಕ ಬೆಳಕೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಭಟ್ಕಳದಲ್ಲಿ ಅರಣ್ಯ ದಾಳಿ: ಶಂಕಿತ ಕಾಡುಪ್ರಾಣಿ ಮಾಂಸ, ಜಿಂಕೆ ಕೊಬ್ಬು ವಶ; ಏರ್‌ಗನ್‌ಗಳೂ ಪತ್ತೆ

Next Post

ಮಾರಿಕಾಂಬಾ ದೇವಸ್ಥಾನ ಜಾತ್ರೆ ಮುನ್ನ ಆನ್‌ಲೈನ್ ವಂಚನೆ ಎಚ್ಚರಿಕೆ ಅಧಿಕೃತವಲ್ಲದ ಜಾಲತಾಣಗಳಿಂದ ಹಣ ಪಾವತಿಸಬೇಡಿ: ದೇಗುಲ ಆಡಳಿತ ಮಂಡಳಿ ಮನವಿ

Kannada News Desk

Kannada News Desk

Next Post
ಮಾರಿಕಾಂಬಾ ದೇವಸ್ಥಾನ ಜಾತ್ರೆ ಮುನ್ನ ಆನ್‌ಲೈನ್ ವಂಚನೆ ಎಚ್ಚರಿಕೆ ಅಧಿಕೃತವಲ್ಲದ ಜಾಲತಾಣಗಳಿಂದ ಹಣ ಪಾವತಿಸಬೇಡಿ: ದೇಗುಲ ಆಡಳಿತ ಮಂಡಳಿ ಮನವಿ

ಮಾರಿಕಾಂಬಾ ದೇವಸ್ಥಾನ ಜಾತ್ರೆ ಮುನ್ನ ಆನ್‌ಲೈನ್ ವಂಚನೆ ಎಚ್ಚರಿಕೆ ಅಧಿಕೃತವಲ್ಲದ ಜಾಲತಾಣಗಳಿಂದ ಹಣ ಪಾವತಿಸಬೇಡಿ: ದೇಗುಲ ಆಡಳಿತ ಮಂಡಳಿ ಮನವಿ

Please login to join discussion

ಕ್ಯಾಲೆಂಡರ್

February 2026
MTWTFSS
 1
2345678
9101112131415
16171819202122
232425262728 
« Jan    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d