• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, October 22, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಪುಟ್ಟರಾಜರು ಹುಟ್ಟಿದ ಮಾರ್ಚ್ ೩ ರಂದು ಕಲಾವಿಕಾಸ ದಿನಾಚರಣೆ ಎಂದು ಆಚರಿಸಲು ಸರಕಾರಕ್ಕೆ ಒತ್ತಾಯ – ಚನ್ನವೀರಶ್ರೀ*

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
March 16, 2023
in ರಾಜ್ಯ ಸುದ್ದಿ
0
ಪುಟ್ಟರಾಜರು ಹುಟ್ಟಿದ ಮಾರ್ಚ್ ೩ ರಂದು ಕಲಾವಿಕಾಸ ದಿನಾಚರಣೆ ಎಂದು ಆಚರಿಸಲು ಸರಕಾರಕ್ಕೆ ಒತ್ತಾಯ – ಚನ್ನವೀರಶ್ರೀ*
0
SHARES
113
VIEWS
WhatsappTelegram Share on FacebookShare on TwitterLinkedin


*ಪುಟ್ಟರಾಜರು ಹುಟ್ಟಿದ ಮಾರ್ಚ್ ೩ ರಂದು ಕಲಾವಿಕಾಸ ದಿನಾಚರಣೆ ಎಂದು ಆಚರಿಸಲು ಸರಕಾರಕ್ಕೆ ಒತ್ತಾಯ – ಚನ್ನವೀರಶ್ರೀ*

ಮುಂಡರಗಿ-ಡಾ. ಪಂ. ಪುಟ್ಟರಾಜರು ಹುಟ್ಟಿದ ದಿನ ಮಾರ್ಚ್ ೩ರಂದು, ಕಲಾವಿಕಾಸ ದಿನಾಚರಣೆ ಎಂದು ಪೂಜ್ಯರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸರ್ಕಾರಕ್ಕೆ ಒತ್ತಾಯಿಸಿದರು. ಅವರು, ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನಿಶ್ವರ ಸಂಸ್ಥಾನ ಮಠದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಘಟಕ ಗದಗ ಆಯೋಜಿಸಿದ್ದ, ಪಂ. ಪುಟ್ಟರಾಜ ಉತ್ಸವವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ ಪುಟ್ಟರಾಜ ಸೇವಾ ಸಮಿತಿಯಿಂದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಆಧುನಿಕ ವಚನಕಾರರಿಗೆ ವೇದಿಕೆ ನೀಡಲು ಯೋಚಿಸಿದ್ದೇವೆ. ಆಧುನಿಕ ವಚನಕಾರರಲ್ಲಿ ಬಹುಎತ್ತರದ ಸ್ಥಾನದಲ್ಲಿ ಇರುವ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕು ಎಂದು ಅಭಿಪ್ರಾಯಪಟ್ಟರು.
ಡಾ. ಪಂ. ಪುಟ್ಟರಾಜ ಉತ್ಸವ ಬದಲಾಗಿ ಪಂಚಾಕ್ಷರಿ ಪುಟ್ಟರಾಜ ಉತ್ಸವನಾಗಿ ಆಚರಿಸಬೇಕು ಎಂದು ನಾಡೋಜ ಡಾ. ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು ಅವರು ಉತ್ಸವದ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ನೇತೃತ್ವ ವಹಿಸಿಕೊಂಡಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯ ಅಜ್ಜನವರು ಮಾತನಾಡಿ, ಪಂ. ಪುಟ್ಟರಾಜ ಕವಿ, ಗವಾಯಿಗಳವರ ಜಯಂತಿಯನ್ನು ಕಲಾ ವಿಕಾಸ ದಿನಾಚರಣೆಯಾಗಿ ಆಚರಿಸಬೇಕು ಎನ್ನುವ ಪುಟ್ಟರಾಜ ಸೇವಾ ಸಮಿತಿಯ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಸಮಿತಿಯೊಂದಿಗೆ ಭಕ್ತರೆಲ್ಲ ಸೇರಿ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು. ರೇವಣಸಿದ್ದಯ್ಯ ಹಿರೇಮಠ ಚಿಂಚೋಳಿ, ಡಾ. ಸುಮಾ ಹಡಪದ ಹಳಿಯಾಳ, ಡಾ. ನಿಂಗೂ ಸೊಲಗಿ ಮುಂಡರಗಿ, ಡಾ. ಪಿ. ಬಿ. ಹಿರೇಗೌಡರ್ ಮುಂಡರಗಿ, ಮಳ್ಳಪ್ಪ ಮಾಸ್ಟರ್ ಗುಡಿಸಲಮನಿ ಗುಡ್ಡದ ಬೂದಿಹಾಳ, ಸಂಗೀತ ಗುರು, ರೇವಣಸಿದ್ದಪ್ಪ ಎಂ. ಕೆ. ದಾವಣಗೆರೆ, ಇವರುಗಳಿಗೆ ಡಾ. ಪಂ. ಪುಟ್ಟರಾಜ ಕೃಪಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವೇ.ಮೂರ್ತಿ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸಂಪಾದಿಸಿದ ಪುಟ್ಟರಾಜರು ಬರೆದ ಗುರು ವಚನ ಪ್ರಭ ವಚನಗಳ ವಿಶ್ಲೇಷಣಾ ಲೇಖನಗಳ ಸಂಕಲನ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಪೂಜ್ಯ ಕಲ್ಲಯ್ಯ ಅಜ್ಜನವರ ತುಲಾಭಾರ ಭಕ್ತಿ ಸೇವೆಯನ್ನು ನಾಗೇಶ್ ಹುಬ್ಬಳ್ಳಿ ಪರಿವಾರದವರು ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ಸಂಜೆ ಐದು ಗಂಟೆಗೆ ಕೋಟೆಯ ಆಂಜನೇಯ ದೇಸ್ಥಾನದಿಂದ ಅನ್ನದಾನೇಶ್ವರ ಮಠದವರಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳೆಯರಿಂದ ಪೂರ್ಣ ಕುಟುಂಬ ಅಕ್ಕನ ಬಳಗದವ ಆರತಿ ಮತ್ತು ವಾದ್ಯ ವೈಭವಗಳಿಂದ ಪೂಜ್ಯ ಪುಟ್ಟರಾಜ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡಮನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವವಣಿಗೆಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಕೋಷ್ಯಾಧ್ಯಕ್ಷರಾದ ಮುಂಡರಗಿ ಪುರಸಭೆಯ ಸದಸ್ಯರಾದ ನಾಗೇಶ್ ಹುಬ್ಬಳ್ಳಿ ಇವರು ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ಕರಿಬಸಪ್ಪ ಹಂಚಿನಾಳ, ಡಾ ಭೀಮಸಿಂಗ್ ರಾಥೋಡ್, ಪ್ರಕಾಶ್ ಹೊಸಮನಿ, ದಾವಣಗೆರೆಯ ವಿನಾಯಕ ಪಿ ಬಿ, ಕಲಾವಿದ ಮಹಿಬೂಬಸಾಬ ಬೆಟಗೇರಿ, ಮಲ್ಲಿಕಾರ್ಜುನ ಕುಂಬಾರ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ ಹಳ್ಳೂರಮಠ ಬೆಳಧಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದೇವು ಹಡಪದ ತಿಪ್ಪಾಪೂರ, ಜಿಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ ಜಿಲಾ ಸಂಚಾಲಕರು, ಶಿವು ವಾಲಿಕಾರ ಮಕ್ತುಂಪುರ. ಶರಣಯ್ಯ ಅಲ್ಲಾಪೂರ ಸಾ|| ಐನೋಳ್ಳಿ. ಚಿಂಚೋಳಿ, ಶರಣಬಸಪ್ಪ ಹೊಸಮನಿ ಚಿಂಚೋಳ್ಳಿ. ಬಸವರಾಜ ನೀಲಪ್ಪ ಸಿದ್ದಣ್ಣವರ ಸಂಗೀತ ಶಿಕ್ಷಕರು ಸಾ. ಡಂಬಳ. ಕೆ. ನಾಗರಾಜ ಮುಖ್ಯೆ ಶರಣಪ್ಪ ಹೊಸಮನಿ ಅಶೋಕ ಲ. ಚೂರಿ ಉಪಸ್ಥಿತರಿದ್ದರು. ಕುಮಾರಿ ನಕ್ಷತ್ರ ಹಡಪದ ಸಂಗಡಿಗರು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಮಂಜುನಾಥ್ ಮುಧೋಳ್ ಸ್ವಾಗತಿಸಿದರು ಶಿವು ವಾಲಿಕಾರ ವಂದಿಸಿದರು. ಕಲಾವಿದ ಬಸವರಾಜ ನೆಲಜರಿ ಹಾಗೂ ನಿರ್ಮಲ ಶೇರವಾಡೆ ಕಾರ್ಯಕ್ರಮವನ್ನು ನಿರೂಪಿಸಿದರು ಸಭಾ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತರಿಂದ ಮತ್ತು ಸ್ಥಳಿಯ ಕಲಾವಿದರಿಂದ ಶಾಸ್ತ್ರೀಯ, ಸುಗಮ, ವಚನ ಸಂಗೀತ ಕಾರ್ಯಕ್ರಮ ನಡೆದವು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷದ ಎಂ.ಎಲ್.ಎ ಅಭ್ಯರ್ಥಿಯಾಗಿ ಉಪನ್ಯಾಸಕ ಶಂಕರ್ ಗೌಡ ಗುಣವಂತೆ ಸ್ಪರ್ಧೆ

Next Post

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ

Kannada News Desk

Kannada News Desk

Next Post
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ

Please login to join discussion

ಕ್ಯಾಲೆಂಡರ್

March 2023
MTWTFSS
 12345
6789101112
13141516171819
20212223242526
2728293031 
« Feb   Apr »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d