• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, March 11, 2026
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಭಟ್ಕಳದಲ್ಲಿ ಅಂಜುಮನ್ ಕಾಲೇಜಿನಲ್ಲಿ “ಹಿಂದೂ” ಉಪನ್ಯಾಸಕರಿಂದ ಇಫ್ತಾರ್ ಸಂಗಮ

Kannada News Desk by Kannada News Desk
March 24, 2025
in ಉತ್ತರ ಕನ್ನಡ
0
ಭಟ್ಕಳದಲ್ಲಿ ಅಂಜುಮನ್ ಕಾಲೇಜಿನಲ್ಲಿ “ಹಿಂದೂ” ಉಪನ್ಯಾಸಕರಿಂದ ಇಫ್ತಾರ್ ಸಂಗಮ
0
SHARES
843
VIEWS
WhatsappTelegram Share on FacebookShare on TwitterLinkedin


ಭಟ್ಕಳ: ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜ್ ಹಾಗೂ ಪಿಜಿ ಕೇಂದ್ರದಲ್ಲಿ ಮಾ. 23, ಭಾನುವಾರದಂದು ಕಾಲೇಜಿನ ಹಿಂದೂ ಉಪನ್ಯಾಸಕರಿಂದ ತಮ್ಮ ಮುಸ್ಲಿಂ ಸಹೋದ್ಯೋಗಿಗಳಿಗಾಗಿ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಹಿಬ್ಬಾನ್ ಶಾಬಂದ್ರಿ, “ಅಂಜುಮನ್‌ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ನಮ್ಮೊಂದಿಗೆ ಕೆಲಸ ಮಾಡುವ ಹಿಂದೂ ಸಹೋದ್ಯೋಗಿಗಳು ರಮಝಾನ್ ತಿಂಗಳಲ್ಲಿ ತಮ್ಮ ಮುಸ್ಲಿಂ ಸಹಪಾಠಿಗಳಿಗಾಗಿ ಇಫ್ತಾರ್ ಪಾರ್ಟಿ ಮತ್ತು ರಾತ್ರಿ ಭೋಜನವನ್ನು ಆಯೋಜಿಸಿದ್ದಾರೆ. ಇದು ಪರಸ್ಪರ ಸೌಹಾರ್ದತೆ ಮತ್ತು ಸಹೋದರತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಅಂಜುಮನ್‌ನ ಎಲ್ಲಾ ಸಂಸ್ಥೆಗಳಲ್ಲಿ ಹಲವಾರು ಅನ್ಯ ಧರ್ಮೀಯ ಉಪನ್ಯಾಸಕರು ಮತ್ತು ಸಿಬ್ಬಂಧಿಗಳು ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಸೌಹಾರ್ದತೆಯ ವಾತಾವರಣವಿತ್ತು. ಇಂದಿನ ಈ ಇಫ್ತಾರ್ ಪಾರ್ಟಿಯು ಆ ಸಹೋದರತೆಯ ವಾತಾವರಣಕ್ಕೆ ಸಾಕ್ಷಿಯಾಗಿದೆ. ಎಲ್ಲಾ ಧರ್ಮದ ಜನರು ಇಲ್ಲಿ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಹೋದರತೆಯ ವಾತಾವರಣ ಸಮಾಜದಲ್ಲಿ ಸಾಮಾನ್ಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದರು.


ಇಫ್ತಾರ್‌ಗೆ ಮುಂಚೆ ಬಿಬಿಎ ಕಾಲೇಜಿನ ಪ್ರೊಫೆಸರ್ ಮೌಲಾನಾ ಮೊಹಮ್ಮದ್ ಜಾಫರ್ ನದ್ವಿ ಅವರು ಪ್ರಾರ್ಥನೆ ಸಲ್ಲಿಸಿದರು. ನಮಾಝ್ ಬಳಿಕ ಉತ್ತಮ ರಾತ್ರಿ ಭೋಜನದ ವ್ಯವಸ್ಥೆಯೂ ಇತ್ತು. ಎಲ್ಲಾ ಸಹೋದ್ಯೋಗಿಗಳು ಒಟ್ಟಾಗಿ ಸಂತೋಷದಲ್ಲಿ ಭಾಗವಹಿಸಿದರು. ವಿಶೇಷವಾಗಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಎಸ್. ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಪ್ರಭು, ಕನ್ನಡ ಉಪನ್ಯಾಸಕ ಪ್ರೊ. ದಾಮೋದರ ನಾಯಕ್ ಸೇರಿದಂತೆ ಎಲ್ಲಾ ಹಿಂದೂ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರು ಇಫ್ತಾರ್ ಪಾರ್ಟಿಯ ಆಯೋಜನೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಕೆ. ಶೇಖ್ ಅವರು ಸುಂದರ ಇಫ್ತಾರ್ ಪಾರ್ಟಿಯ ಆಯೋಜನೆಗಾಗಿ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು.

 

“ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಉಪನ್ಯಾಸಕರು ನಮ್ಮ ಕಾಲೇಜಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಅಂಜುಮನ್ ಪದವಿ ಮಹಾವಿದ್ಯಾಲಯದ ಹಿಂದೂ ಉಪನ್ಯಾಸಕರು ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪರಂಪರೆಗೆ ಒಂದು ಹೊಸ ಆಯಾಮವನ್ನು ಸೇರಿಸಿದ್ದಾರೆ,” ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಎಸ್. ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

“ಈ ಇಫ್ತಾರ್ ಆಯೋಜನೆಯಿಂದ ನಾವು ಕೂಡ ರಮಜಾನ್ ಹಬ್ಬದ ಸಂತೋಷದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದೇವೆ. ಅಂಜುಮನ್ ಸಂಸ್ಥೆಯಲ್ಲಿ ಎಲ್ಲ ಜಾತಿ-ಧರ್ಮದ ಉಪನ್ಯಾಸಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಏನೇ ಘಟನೆಗಳು ನಡೆದರೂ, ಇಲ್ಲಿ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಇದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ರಮಜಾನ್ ಉಪವಾಸವನ್ನು ಆಚರಿಸುವುದು ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸಲು ಕಾರಣವಾಗುತ್ತದೆ. ಇದು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬಲ್ಲದು. ಸಮಾಜದಲ್ಲಿ ಎಲ್ಲೆಡೆ ಹಿಂದೂ-ಮುಸ್ಲಿಂ ಎಂದು ಧ್ರುವೀಕರಣ ಮಾಡುವಾಗ, ಈ ಕಾರ್ಯಕ್ರಮವು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕು,” ಎಂದು ಅವರು ಒತ್ತಿ ಹೇಳಿದರು.

“ದೇಶದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಧರ್ಮ ಮತ್ತು ಭಾಷೆಗಳನ್ನು ಮುಂದಿಟ್ಟುಕೊಂಡು ಗಲಭೆಗಳು ಮತ್ತು ಗೊಂದಲಗಳು ಸೃಷ್ಟಿಯಾಗುತ್ತಿವೆ. ಯುವ ಸಮುದಾಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಕೋಮು ಧ್ರುವೀಕರಣದ ತಪ್ಪು ನಿರೂಪಣೆಯಿಂದ ಹೊರಬರಬೇಕು. ನಾವೆಲ್ಲರೂ ಮನುಷ್ಯರೆಂಬ ಏಕತೆಯ ಭಾವನೆಯಲ್ಲಿ ಪ್ರೀತಿ, ಪ್ರೇಮ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು,” ಎಂದು ಪ್ರೊ. ನಾಯಕ್ ಕರೆ ನೀಡಿದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಮುಂಡಗೋಡ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲೂ ನೀರಿಲ್ಲ: ನೀರಿನ ಸಮಸ್ಯೆಯಿಂದ ಬಸ ಸ್ಯಾಂಡ್ ಕ್ಯಾಂಟೀನ್ ಕೂಡ ಬಂದ್

Next Post

ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿಯಿಂದ ಸಾರ್ವಜನಿಕ ರಿಂದ ಅಕ್ರಮವಾಗಿ ಹಣ ವಸೂಲಿ

Kannada News Desk

Kannada News Desk

Next Post
ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿಯಿಂದ ಸಾರ್ವಜನಿಕ ರಿಂದ ಅಕ್ರಮವಾಗಿ ಹಣ ವಸೂಲಿ

ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿಯಿಂದ ಸಾರ್ವಜನಿಕ ರಿಂದ ಅಕ್ರಮವಾಗಿ ಹಣ ವಸೂಲಿ

Please login to join discussion

ಕ್ಯಾಲೆಂಡರ್

March 2025
MTWTFSS
 12
3456789
10111213141516
17181920212223
24252627282930
31 
« Feb   Apr »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d