ಭಟ್ಕಳ-ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ, ಬಡವರ ಪಾಲಿನ ದೇವತಾ ಮನುಷ್ಯ, ಜನಪ್ರಿಯ ವೈದ್ಯರಾದ ಡಾ.ಅರುಣ ಕುಮಾರ್ ಅವರನ್ನು ವರ್ಗಾವಣೆ ಮಾಡದಂತೆ ಮತ್ತು ಅವರ ಮೇಲೆ ಸಣ್ಣ ಪುಟ್ಟ ವೈಯಕ್ತಿಕ ದೂರುಗಳ ಆಧಾರ ದ ಮೇಲೆ ಯಾವುದೇ ಕ್ರಮ ಕೈ ಗೊಳ್ಳಬಾರದು ಎಂದು ಭಟ್ಕಳ ಪ್ರಜ್ಞಾವಂತ ನಾಗರಿಕರ ವತಿಯಿಂದ ಜಿಲ್ಲಾಧಿಕಾರಿ ಗೆ ತಹಶೀಲ್ದಾರ ರ್ ಮೂಲಕ ಮನವಿ ನೀಡಿದರು.

ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ ಜನಪ್ರಿಯ ವೈದ್ಯರಾದ ಡಾ.ಅರುಣ ಕುಮಾರ್ ಇವರು ಹಲವಾರು ವರ್ಷಗಳಿಂದ ಬಡವರ ಸೇವೆ ಸಲ್ಲಿಸುತ್ತಿದ್ದು, ಇವರು ತಾಲೂಕಿನಲ್ಲಿ ಶಸ್ತ್ರ ಚಿಕಿಸ್ತೆ ಮಾಡಿ ಹಲವು ಬಡ ರೋಗಿಗಳ ಜೀವ ಉಳಿಸಿದ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ದಿನದ 24 ಗಂಟೆಗಳ ತನಕ ರೋಗಿಗಳು ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬಂದರೆ ಅವರನ್ನು ಪರೀಕ್ಷಿಸಿ ಅವರಿಗೆ ಔಷದೋಪಚಾರ ನೀಡಿ ಅವರನ್ನು ಬೇರೆ ಖಾಸಗಿ ಆಸ್ಪತ್ರೆ ಹೋಗದಂತೆ ಮತ್ತು ಬಡವರಿಗೆ ಆರ್ಥಿಕವಾಗಿ ತೊಂದೆಯಾಗದಂತೆ ನೋಡಿಕೊಳ್ಳುತ್ತಾರೆ. ಇಂತಹ ಬಡವರ ಬಂಧು, ಹಾಗೂ ಬಡವರ ಜೀವದಾನ ನೀಡುತ್ತಿರುವ ವೈದ್ಯ ಡಾ.ಅರುಣ ಕುಮಾರ್ ಅವರನ್ನು ವರ್ಗಾವಣೆ ಮಾಡಬಾರದು ಭಟ್ಕಳ ಪ್ರಜ್ಞಾವಂತ ನಾಗರಿಕರ ಆಗ್ರಹಿಸಿದ್ದರು..ಅರುಣ ಕುಮಾರ್
ಅವರು 23-24 ರ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿ ವಿಜೇತರಾಗಿದ್ದರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ನಾಯ್ಕ ಹನುಮಾನ ನಗರ, ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಸಗಿರಿ, ಗಣೇಶ್ ಹಳ್ಳೆರ್ ಮುಂಡಳ್ಳಿ, ಶನಿಯಾರ ನಾಯ್ಕ ಮುಂಡಳ್ಳಿ,, ವೆಂಕಟ್ರಮಣ ನಾಯ್ಕ್ ಮುಟ್ಟಳ್ಳಿ, ಮುಂತಾದವರು ಉಪಸ್ಥಿತರಿದ್ದರು.

