ಶಿರಸಿ-30 ವರ್ಷದ ಹಿಂದೆ ನೌಕರಿ ಕೊಡಿಸುವುದಾಗಿ ನಂಬಿಸಿ 200ರೂ ಹಣಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬೈಂದೂರಿನ ಬಿ ಕೆ ರಾಮಚಂದ್ರ ರಾವ್ ಬಂಧಿತ ಆರೋಪಿ.
ಗ್ರಾಮೀಣ ಜನರನ್ನು ಭೇಟಿ ಮಾಡುತ್ತಿದ್ದ ಬಿ ಕೆ ರಾಮಚಂದ್ರ ರಾವ್ ಅವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದರು. ಬಿ ಕೆ ರಾಮಚಂದ್ರ ರಾವ್ ಅವರ ವೇಷಭೂಷಣ ನೋಡಿದ ಜನ ನಿಜವಾಗಿಯೂ ನೌಕರಿ ಕೊಡಿಸುತ್ತಾರೆ ಎಂದು ತಿಳಿದು ಹಣ ಕೊಡುತ್ತಿದ್ದರು. 30 ವಷ್ದ ಹಿಂದೆಯೇ ಅವರು ಅನೇಕರಿಗೆ ವಂಚಿಸಿದ್ದು, ಆ ಪೈಕಿ ಒಬ್ಬರು ದೂರು ನೀಡಿದ್ದರು.
ಅದಾದ ನಂತರ ಶಿರಸಿ ತೊರೆದಿದ್ದ ಬಿ ಕೆ ರಾಮಚಂದ್ರ ರಾವ್ ಬೇರೆ ಬೇರೆ ಊರು ಸುತ್ತಾಡಿ ಜನರನ್ನು ವಂಚಿಸುವ ಕೆಲಸ ಮುಂದುವರೆಸಿದ್ದರು. ಶಿರಸಿ ನ್ಯಾಯಾಲಯಕ್ಕೆ ಸಹ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಪೊಲೀಸರು ಅವರನ್ನು ಇದೀಗ ಹುಡುಕಿ ಹಿಡಿದಿದ್ದಾರೆ.
ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್, ಪಿ ಐ ಮಂಜುನಾಥ್ ಎಂ, ಸಂತೋಷಕುಮಾರ ಎಂ, ಅಶೋಕ್ ರಾಠೋಡ್ ಅವರ ನೇತ್ರತ್ವದಲ್ಲಿ ವಂಚಕನ ಸೆರೆಯಾಗಿದೆ. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಜಿ ಮತ್ತು ಮಾರುತಿ ಗೌಡ ಕಾರ್ಯಾಚರಣೆಯಲ್ಲಿದ್ದರು. ಬೆಂಗಳೂರಿನಲ್ಲಿ ವಂಚಕ ಸಿಕ್ಕಿ ಬಿದ್ದಿದ್ದು, ಬಿ ಕೆ ರಾಮಚಂದ್ರ ರಾವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.