ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ಮತ್ತು ಅಂಬೇಡ್ಕರ್ ಸೇನೆ ಉಡುಪಿ ವತಿಯಿಂದ ತ್ರಾಸಿಯ ಪ್ರೆಸ್ಟಿಜ್ ಪ್ಯಾಲೇಸ್ ನಲ್ಲಿ ಪತ್ರಿಕಾ ದಿನಾಚಾರಣೆಯ ಕಾರ್ಯಕ್ರಮ ಪ್ರಭಾಕರ್ ಪೂಜಾರಿ ಉದ್ಯಮಿ ಉಡುಪಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಜರುಗಿತು
,
ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಆಪತ್ಬಾಂಧವ ಮುಳುಗು ತಜ್ಞ ಈಶ್ವರಮಲ್ಪೆ ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಪಟ್ಟು ಧನ್ವಿ ಮರವಂತೆ, ಅಂತಾರಾಷ್ಟ್ರೀಯ ಪವರ್ ಲಿಫ್ಟರ ಸತೀಶ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅಸಹಾಯಕರಿಗೆ ನೆರವಿನ ಹಸ್ತ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಾಲಾ ಮಕ್ಕಳ ಕಲಿಕಾ ಸಾಮಗ್ರಿ, ಸಾಧಕರಿಗೆ ಸನ್ಮಾನ, ನಡೆಯಿತು,
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಶ್ರೀ ಪ್ರಭಾಕರ್ ಪೂಜಾರಿ, ಉಡುಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷ ಶ್ರೀ ಬಂಗ್ಲೆ ಮಲ್ಲಿಕಾರ್ಜುನ , ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುಡೇಶ್ವರ, ಕುಂದಾಪುರ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ನಾಯ್ಕ, ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯ ಡಾಕ್ಟರ್ ನಾಗೇಶ್ ಪುತ್ರನ್ , ಉದ್ಯಮಿ ಶಿವ ಪೂಜಾರಿ, ಉದ್ಯಮಿ ಪ್ರವೀಣ್ ಶೆಟ್ಟಿ, ಯುವ ಉದ್ಯಮಿ, ಮಂಜುನಾಥ್ ಪೂಜಾರಿ ,ಸಮಾಜ ಸೇವಕ, ಮಂಜುನಾಥ್ ಸಾಲಿಯಾನ್ ಉದ್ಯಮಿ ತ್ರಾಸಿ, ಮುಂತಾದ ಗಣ್ಯರು , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕರಾವಳಿ ವಿಭಾಗದ ಅಧ್ಯಕ್ಷ ಕುಮಾರ.ನಾಯ್ಕ,
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಡುಪಿ ಜಿಲ್ಲೆ ಅಧ್ಯಕ್ಷ ಶ್ರೀ ದಾಮೋದರ್ ಮೊಗವೀರ, ಅಂಬೇಡ್ಕರ್ ಸೇನೆ ರಿ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೂಡು, ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕೋಸ್ಟಲ್ ನ್ಯೂಸ್ ತಂಡದ ವರದಿಗಾರರು ಉಪಸ್ಥಿತರಿದ್ದರು,