ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕದ ನೇತೃತ್ವದಲ್ಲಿ ಭಟ್ಕಳದ ಹಿಂದೂ ಕಾರ್ಯ ಕರ್ತರು ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ ಖಂಡಿಸಿ ಅವರಿಗೆ ಸೂಕ್ತ ರಕ್ಷಣೆ ಗೆ ಆಗ್ರಹಿಸಿ ಪ್ರಧಾನ ಮಂತ್ರಿ ಗೆ ಮನವಿ
ಭಟ್ಕಳ-*ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ಕ್ರೂರ ದೌರ್ಜನ್ಯ, ಕೊಲೆ, ಅತ್ಯಾಚಾರ, ಹಿಂದೂ ದೇವಾಲಯಗಳ ಮೇಲಿನ ದಾಳಿ ಖಂಡಿಸಿ ಮತ್ತು ಅಲ್ಲಿನ ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ, ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕದ ನೇತೃತ್ವದಲ್ಲಿ ಭಟ್ಕಳದ ಹಿಂದೂ ಸಂಘಟನೆಗಳ ಪರವಾಗಿ ಪ್ರತಿಭಟನೆಯನ್ನು ನಡೆಸಿ, ಭಟ್ಕಳ ಸಹಾಯಕ ಆಯುಕ್ತರ ಮೂಲಕ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ಭಟ್ಕಳ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹೊರಟು ನೂರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಟ್ಕಳದ ಸರ್ಕಲ್ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿ, ಬಾಂಗ್ಲಾದೇಶ ದಲ್ಲಿನ ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ, ವ
ಭಟ್ಕಳ ಸಹಾಯಕ ಆಯುಕ್ತರ ಮೂಲಕ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಕೃಷ್ಣ ನಾಯ್ಕ ಆಸರಕೆರಿ ಮಾತನಾಡಿ ಭಟ್ಕಳ್ದಲ್ಲಿ ಅಕ್ರಮವಾಗಿ ಸಾವಿರಾರು ಬಾಂಗ್ಲಾದೇಶ ಮುಸ್ಲಿಮರು ವಾಸವಾಗಿದ್ದಾರೆ.ನಾವು ಕೂಡ ಇಲ್ಲಿ ಅವರನ್ನು ಓಡಿಸಲು ಶುರುಮಾಡಬೇಕಾ ಗುತ್ತದೆ, ನಮ್ಮ ಹಿಂದೂಗಳ ತಾಳ್ಮೆಯನ್ನು ಕೆಣಕಬೇಡಿ ಎಂದೂ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ್ ನಾಯ್ಕ ಆಸರಿಕೇರಿ, ಈಶ್ವರ್ ನಾಯ್ಕ್ ಮುರುಡೇಶ್ವರ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶಿವಾನಿ ಶಾಂತರಮ್, ಶ್ರೀನಿವಾಸ್ ನಾಯ್ಕ್, ರಾಘು ನಾಯ್ಕ್, ಮಹೇಂದ್ರ ನಾಯ್ಕ್, ರಾಜೇಶ್ ನಾಯ್ಕ್, ದಿನೇಶ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.