ಭಟ್ಕಳ: ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಇತ್ತೀಚೆಗೆ ಕಾರವಾರ್ ನಗರದ ಅಜ್ಜಿ ಓಷಿಯನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ “ಸ್ಮಾರ್ಟ್ ಕಾರ್ಡ್” ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಮಿಕ ಕಾರ್ಡ್ ವಿತರಿಸಿದರು . ಇದೆ ಸಂದರ್ಭದಲ್ಲಿ ಅವರು ಭಟ್ಕಳ ತಾಲೂಕಿನ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಮತ್ತು ಪದಾಧಿಕಾರಿಗಳಾಗಿರುವ ಮಂಜುನಾಥ ಮೊಗೇರ ಮತ್ತು ಮಂಜುನಾಥ ದೇವಾಡಿಗ ಅವರು ಸ್ಮಾರ್ಟ್ ಕಾರ್ಡ್ ನಿಡಿದರು. ಪತ್ರಿಕಾ ವಿತರಕರಿಗೆ ಸ್ಮಾರ್ಟ್ಕಾರ್ಡ್ ವಿತರಣೆ ಮಾಡಿದ ಸಚಿವ ಸಂತೋಷ ಲಾಡ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಭಟ್ಕಳ ತಾಲೂಕು ಪತ್ರಿಕಾ ವಿತರಕರ ಸಂಘದ ಪರವಾಗಿ ಅಧ್ಯಕ್ಷ ರಾಮಕೃಷ್ಣ ಭಟ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.