ಭಟ್ಕಳ-ಭಟ್ಕಳದ ಶಿರಾಲಿಯ ಹುಲ್ಲಕ್ಕಿ ಅರಣ್ಯದಲ್ಲಿ ಕೋಳಿ ಅಂಕ ಜುಗಾರಿ ಆತ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಶಿರಾಲಿಯ ಹುಲ್ಲುಕ್ಕಿ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕದ ಜುಗಾರಿ ಆಟ ನಡೆಸಿದ್ದರು. ಮೋಜು-ಮಸ್ತಿಗಾಗಿ ಕಾಳಗ ನಡೆಸಿದವರ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿದರು.
ಈ ವೇಳೆ ೪ ರಿಕ್ಷಾ, ೫ ಬೈಕು ಹಾಗೂ ೩ ಫೋನುಗಳು ಪೊಲೀಸರಿಗೆ ಸಿಕ್ಕಿದವು. ಸ್ಥಳದಲ್ಲಿದ್ದ ೩೩೦೫ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು.ಒಟ್ಟು 18.83 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂದಿದ್ದಾರೆ.ಒಟ್ಟು 15 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.