ಭಟ್ಕಳ-ಭಟ್ಕಳ ತಾಲೂಕ ಪಂಚಾಯತನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀ ಸುನಿಲ್ ಎಂ. ರವರು ಅಧಿಕಾರವಹಿಸಿಕೊಂಡಿರುತ್ತಾರೆ.
ಈ ಹಿಂದೆ ಅವರು ಅಂಕೋಲಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ನೂತನ ಅಧಿಕಾರಿಗೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ ರವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ.ವ್ಯವಸ್ಥಾಪಕ ಕೃಷ್ಣಕಾಂತ್ ನಾಯ್ಕ್ ಉಪಸ್ಥಿತರಿದ್ದರು.