ಭಟ್ಕಳ-ಮನೆಗೆ ಟೈಲ್ಸ್ ಹಾಕಲು ಬಂದವರೇ ಅಡಿಕೆ ಕಳ್ಳತನ ಮಾಡಿದ ಘಟನೆ ಭಟ್ಕಳದ ಮಾರುಕೇರಿಯಲ್ಲಿ ನಡೆದಿದೆ. ಟೈಲ್ಸ್ ಹಾಕುವ ಕೆಲಸಕ್ಕೆ ಬಂದಾಗಲೇ ಸ್ಕೆಚ್ ಹಾಕಿದ್ದ ಖದೀಮರು ಅಡಿಕಕೆ ಕಳ್ಳತನ ಮಾಡಿದ್ದಾರೆ. ಪೊಲೀಸರು ನಾಲ್ವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೊಬ್ಬ ಕಳ್ಳ ಎಸ್ಕೇಪ್ ಆಗಿದ್ದಾನೆ.
ಮೊಹಮ್ಮದ್ ಸಾಧಿಕ್ ಶೇಖ್ (26), ಮೊಹಮ್ಮದ್ ಖಾಜಾ (20),ಮೊಹಮ್ಮದ್ ಇರ್ಶಾದ್ (28), ಮೊಹಮ್ಮದ್ ಮುಸಾದಿಕ್ (36)ಪೋಲೀಸರ ಬಲೆಗೆ ಬಿದ್ದ ನಾಲ್ವರು ಆರೋಪಿಗಳು.ಮೊಹಮ್ಮದ್ ನಿಜಾಮ್ ಪೋಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾರೆ.ಈತನ ಬಂಧನಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಲೆ ಬಿಸಿದ್ದಾರೆ.
ಭಟ್ಕಳದ ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಗೊಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. 26 ವರ್ಷದ ಮೊಹಮ್ಮದ್ ಸಾಧಿಕ್ ಶೇಖ್, 20 ವರ್ಷದ ಮೊಹಮ್ಮದ್ ಖಾಜಾ, 28 ವರ್ಷದ ಮೊಹಮ್ಮದ್ ಇರ್ಶಾದ್ ಹಾಗೂ 36 ವರ್ಷದ ಮೊಹಮ್ಮದ್ ಮುಸಾದಿಕ್ ಬಂಧಿತ ಆರೋಪಿಗಳು. ಇನ್ನು ಮೊಹಮ್ಮದ್ ನಿಜಾಮ್ ಹೆಬಳೆ ಎಂಬಾತ ಎಸ್ಕೇಪ್ ಆಗಿದ್ದಾನೆ.
ಸುಮಾರು 2 ತಿಂಗಳ ಹಿಂದೆ ಭಟ್ಕಳ ದ ಮಾರುಕೇರಿಯ ನಾಗಪ್ಪಯ್ಯ ಭಟ್ಟ ಎಂಬುವವರ ಮನೆಗೆ ಟೈಲ್ಸ್ ಹಾಕಲು ಸಾಧಿಕ್ ಶೇಖ್ ಮತ್ತು ಖಾಜಾ ಬಂದಿದ್ದರು. ಈ ವೇಳೆ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಕೆಲ ದಿನಗಳ ನಂತರ ತಮ್ಮ ಸಹಚರರ ಜೊತೆಗೂಡಿ ಮಧ್ಯರಾತ್ರಿ ಆ ಮನೆಗೆ ನುಗ್ಗಿ ಅಡಿಕೆ ಚೀಲ ಕದ್ದೊಯ್ದಿದ್ದರು. ಮನೆಯ ಮಾಲಿಕ ನಾಗಪ್ಪಯ್ಯ ಭಟ್ಟ ಜುಲೈನಲ್ಲಿ ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಈಗ ಅರೆಸ್ಟ್ ಮಾಡಿ, ಅವರಿಂದ 175 ಕೆ.ಜಿ ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಮೊಹಮ್ಮದ್ ನಿಜಾಮ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿ.ಐ ಮಂಜುನಾಥ ಎ. ಲಿಂಗಾರೆಡ್ಡಿ, ಎಎಸ್‌ಐ ಗಣಪತಿ ಬೆನಕಟ್ಟಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.