ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗಲೇ ವೀರ ಮರಣವನ್ನಪ್ಪಿದ್ದ ಕಡವಾಡ ವೀರ ಯೋಧ ಹುತಾತ್ಮ ವಿನೋದ ನಾಯ್ಕ ರ 20ನೇ ಪುಣ್ಯ ತಿಥಿಯಂದು ನೂತನ ಸ್ಮಾರಕ ಉದ್ಘಾಟನೆ
ಕಾರವಾರ- 19 ವರ್ಷಗಳ ಹಿಂದೇ ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗಲೇ ವೀರ ಮರಣವನ್ನಪ್ಪಿದ್ದ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ ವೀರ ಯೋಧ ಹುತಾತ್ಮ ವಿನೋದ ನಾಯ್ಕ ಅವರ 20ನೇ ಪುಣ್ಯ ತಿಥಿಯನ್ನು ಹಾಗೂ ನೂತನ ಸ್ಮಾರಕ ಉದ್ಘಾಟನೆ ಗ್ರಾಮ ಪಂಚಾಯತ ವತಿಯಿಂದ ನೆರವೇರಿಸಲಾಯಿತು. ಹುತಾತ್ಮ ವೀರ ಯೋಧ ವಿನೋದ ನಾಯ್ಕ ಅವರ ಸ್ಮಾರಕವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದು ನಾಯ್ಕ ಹಾಗೂ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಬಂಟ ಅವರು ಉದ್ಘಾಟಿಸಿದರು. ವೀರ ಯೋಧ ಹುತಾತ್ಮ ದಿ ವಿನೋದ ನಾಯ್ಕ ಅವರ ಶೌರ್ಯ ಬಲಿದಾನ ವೀರತ್ವದ ದೇಶಕ್ಕೆ ಸಲ್ಲಿಸಿದ ಸೇವೆ ಕುರಿತು ಗ್ರಾ ಪಂ ಸದಸ್ಯ ಕಿಶೋರ ಕಡವಾಡಕರ ಬಿ. ಜೆ ಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಯುವ ಪ್ರಶಸ್ತಿ ಪುರಸ್ಕೃತ ಉದಯ ಭೋವಿ ಕೃಷ್ಣಾ ವೈಂಕಣಕರ ಗುಣಗಾನ ಮಾಡಿದರು.ಯೋಧನ ವಿನೋದ ನಾಯ್ಕ ಅವರ ಕುಟುಂಬದವರ ಹಾಗೂ ದಾನಿಗಳ ಸಹಾಯದಿಂದ ನೂತನ ಸ್ಮಾರಕ ನಿರ್ಮಾಣ ಮಾಡಲಾಗಿದೆ.ಈ ಹುತಾತ್ಮ ಯೋಧನ ನೂತನ ಸ್ಮಾರಕ ನಿರ್ಮಿಸುವ ಕಾರ್ಯವನ್ನು ಸತೀಶ ಸಿ ನಾಯ್ಕ ಅವರು ಕೈಗೆತ್ತಿಕೊಂಡು ಅಚ್ಚುಕಟ್ಟಾಗಿ ನಿರ್ಮಿಸಿ ಕೊಟ್ಟಿದ್ದಾರೆ.
ಮಹಾದೇವ ಡಿ . ನಾಯ್ಕ ಗೀತಾ ಎಮ್ ನಾಯ್ಕ ದಂಪತಿಗಳ ಏಕೈಕ ಮಗನಾಗಿದ್ದ ಲ್ಯಾನ್ಸ್ ನಾಯಕ ವೀರ ಹುತಾತ್ಮ ವಿನೋದ ನಾಯ್ಕ ಅವರು ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ್ದರು . ಈ ಹುತಾತ್ಮ ಯೋಧನ 20 ನೇ ವರ್ಷ ಸಂದರೂ ಅವರ ವೀರತ್ವ ಬಲಿದಾನ ಶೌರ್ಯ ದೇಶ ಸೇವೆ ಅಜರಾಮರವಾಗಿದೆ. ಕಡವಾಡ ಗ್ರಾಮದ ಮಹಾದೇವ ಡಿ. ನಾಯ್ಕ ಗೀತಾ ಮಹಾದೇವ ನಾಯ್ಕ ದಂಪತಿಗಳ ಏಕೈಕ ಪುತ್ರರಾಗಿದ್ದ ವೀರ ಯೋಧ ಲ್ಶಾನ್ಸ್ ನಾಯಕ ದಿ. ವಿನೋದ ನಾಯ್ಕ ಅವರು ಅಗಸ್ಟ್ 18 ರಂದು 2005 ರಲ್ಲಿ ಭಾರತ ದೇಶದ ಜಮ್ಮುಕಾಶ್ಮೀರ ಪೂಂಚ್ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ಹುತಾತ್ಮ ರಾಗಿದ್ದರು. ಅಂದು ಕುಟುಂಬದಲ್ಲಿ ತಂದೆತಾಯಿ ಸೋದರಿ ಇವರನ್ನು ಕಳೆದುಕೊಂಡು ದುಃಖ ಮಡುವಿನಲ್ಲಿ ಇದ್ದ ಸ್ವಾಂತನ ಹೇಳಲು ಹಾಗೂ ಹುತಾತ್ಮ ಯೋಧನ ಪ್ರಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಕಡವಾಡದತ್ತ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಮತ್ತು ಅಂದು ಅಣ್ಣ ತಂಗಿಯರ ರಕ್ಷಾ ಬಂಧನದ ಹಬ್ಬ
ಮತ್ತು ಅಂದು ಅಣ್ಣ ತಂಗಿಯರ ರಕ್ಷಾ ಬಂಧನದ ಹಬ್ಬದ ಸಂದರ್ಭದಲ್ಲಿ ದಿ. ವೀರ ಯೋಧ ಹುತಾತ್ಮ ದಿ . ವಿನೋದ ನಾಯ್ಕ ಉಗ್ರರ ಗುಂಡೇಟಿಗೆ ಗಡಿಯಲ್ಲಿ ವೀರ ಮರಣವನ್ನಪ್ಪಿದ್ದರು. ಈ ಯೋಧನ ಸ್ಮರಣಾರ್ಥ ತಂದೆ ತಾಯಿ ಗ್ರಾಮದಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಿ ಕಳೆದ ಆಗಸ್ಟ್ 15 ರಂದು ನಿವೃತ್ತ ಸೈನಿಕರ ಅಮೃತ ಹಸ್ತದಿಂದ ಉದ್ಘಾಟಿಸಿ ಗ್ರಾಮ ಪಂಚಾಯಿತಿಗೆ ಹಸ್ತಾತರಿ ದೇಶಕ್ಕೆ ಮಾದರಿಯಾಗಿದ್ದರು. ಈಗ ತನ್ನ ಮಗನಾಗಿದ್ದ ವೀರ ಹುತಾತ್ಮ ನೂತನ ಸ್ಮಾರಕ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ. ಇದ್ದರಿಂದ ಕಡವಾಡ ಗ್ರಾಮದ ಐತಿಹಾಸಿಕ ನೆಲೆಯಲ್ಲಿ ಹೆಚ್ಚಿನ ಮಹತ್ವ ತಂದುಕೊಟ್ಟಿದ್ದು ಇನ್ನೊಮ್ಮೆ ಮಾದರಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಬಂಟ ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದು ನಾಯ್ಕ ಉಪಾಧ್ಯಕ್ಷೆ ರಿತೀಕಾ ಹುಲ್ಸವಾರ ಸದಸ್ಯರಾದ ದೇವರಾಜ್ ರ್ನಾವೇಕರ ಕಿಶೋರ ಕಡವಾಡಕರ ಸೆನ್ನಾ ಮಾಂಜ್ರೇಕರ ಗ್ರಾ ಪಂ ಸದಸ್ಯರು ಹಾಗೂ ನಿವೃತ್ತ ಸೈನಿಕರು ಗಣ್ಯರು ಅಭಿಮಾನಿಗಳು ಊರ ನಾಗರಿಕರು ಮುಂದಲಾದವರು ಉಪಸ್ಥಿತರಿದ್ದರು.