ಭಟ್ಕಳ-ಭಟ್ಕಳದ ಬಾಲಕಿಯನ್ನು ಅಪಹರಿಸಿದ ಪುಂಡ-ಪೋಕರಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅದಾದ ನಂತರ ರಕ್ಷಣೆಗೆ ಒಳಗಾದ ಬಾಲಕಿಯನ್ನು ಅವರ ಮನೆಗೆ ಬಿಟ್ಟು ಬಂದಿದ್ದಾರೆ.
ಹಾವೇರಿ ಜಿಲ್ಲೆಯ ಶಿವಪುರದ ಆಸೀಫ್ ಜಮಾಲಸಾಬ್ ಹಾಗೂ ಭಟ್ಕಳದ ಜಾಲಿ ತಗ್ಗರಗೋಡ ನಿವಾಸಿ ಮೊಹ್ಮದ್ ಮೋಸಿನ್ ಮೊಹ್ಮದ್ ರಿಜ್ವಾನ್ ಎಂಬಾತರು ಭಟ್ಕಳದ ಹನೀಫಾಬಾದ್ 1ನೇ ಕ್ರಾಸ್‌ನಿಂದ ಬಾಲಕಿಯನ್ನು ಅಪಹರಿಸಿದ್ದರು. ಬುಲೆರೋ ಪಿಕ್‌ಅಪ್ ಒಳಗೆ ಬಾಲಕಿಯನ್ನು ಎಳೆದೊಯ್ದಿದ್ದರು. ಈ ಬಗ್ಗೆ ಬಾಲಕಿ ತಾಯಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆಗಿಳಿದರು.ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಮುಂದಾಳತ್ವದಲ್ಲಿ ಎಎಸ್‌ಐ ನಾರಾಯಣ, ಹೆಡ್ ಕಾನ್‌ಸ್ಟೇಬಲ್ ನಾರಾಯಣ ಮತ್ತು ಪೊಲೀಸ್ ಸಿಬ್ಬಂದಿ ಅಕ್ಷಯಕುಮಾರ ಅವರು ಅಪಹರಣಕಾರರನ್ನು ಪತ್ತೆ ಮಾಡಿದರು. ಅಪಹರಣ ನಡೆದ 6 ತಾಸಿನ ಒಳಗೆ ಅವರನ್ನು ಮಾವಿನಗುಂಡಿ ಬಳಿ ಬಂಧಿಸಿದರು.