ಭಟ್ಕಳ-ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಇಂದು ಕರಾವಳಿ ಮೀನುಗಾರರ ಕಲಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಉದ್ಘಾಟಿಸಿ ಸಂಘಕ್ಕೆ ಚಾಲನೆ ನೀಡಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೀನುಗಾರಿಕೆ ಸಚಿವರು ಮೀನುಗಾರರ ಬದುಕು ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ, ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸಮುದ್ರದ ಆಳಕ್ಕೆ ದುಡಿಯಲು ಹೋಗುವ ಮೀನುಗಾರನ ಬದುಕು ನಿಜಕ್ಕೂ ಕಠಿಣ. ಇಂತಹ ಮೀನುಗಾರರು ಎಲ್ಲರು ಒಗ್ಗಟ್ಟಿನಿಂದ ಇಂದು ಜೊತೆಯಾಗಿ ತಮ್ಮವರ ಕ್ಷೇಮಭಿವೃದ್ಧಿಗಾಗಿ ಸಂಘ ಸ್ಥಾಪಿಸಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಇವತ್ತು ನಾನು ರಾಜ್ಯದಲ್ಲಿ ಮೀನುಗಾರಿಕೆ ಮಂತ್ರಿಯಾಗಿ ಸೇವೆ ಮಾಡುತ್ತಿರುವುದಕ್ಕೆ ಕಾರಣ ಮೀನುಗಾರರು ಆ ಶ್ರೇಯಸ್ಸು ನಿಮಗೆ ಸಲ್ಲಬೇಕಾಗುತ್ತದೆ. ಪೃಕೃತಿಗೆ ಸವಾಲೋಡ್ಡಿ ಸಮುದ್ರ ಅಲೆಗಳ ವಿರುದ್ಧ ಹೊರಾಡುವ ಮೀನುಗಾರ ನಿಜಕ್ಕೂ ಯೋಧನೇ ಎನ್ನಬಹುದು.
ತಾವು ಕಷ್ಟ ಪಟ್ಟು ದುಡಿಯುವ ಹಣದಲ್ಲಿ ನೀಡುತ್ತಿದ್ದ ಶೇಕಡಾ 22% ಹಣವನ್ನು ಶೇಕಡಾ 25% ಏರಿಸಬೇಕೆಂದು ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ಮೀನುಗಾರರು ಇಂದು ಹೋರಾಟದ ಜೊತೆಯಲ್ಲಿ ಮೀನುಗಾರರ ಕ್ಷೇಮಾ ಅಭಿವೃದ್ದಿ ಸಂಘ ಸ್ಥಾಪಿಸಿರುವುದು ಹಗಲು,ಈರುಳು ಎನ್ನದೆ ದುಡಿಯುವ ಕರಾವಳಿಯ ಎಲ್ಲ ಮೀನುಗಾರರ ಕಾರ್ಮಿಕರಿಗೆ ಧೈರ್ಯ ಬಂದಂತಾಗಿದೆ ಎಂದರು.
ಮೀನುಗಾರರ ಕ್ಷೇಮಕ್ಕಾಗಿ ನಮ್ಮ ಸರಕಾರ ನಮ್ಮ ಇಲಾಖೆ 2 ವರ್ಷದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಧನ ನೀಡುತ್ತಿದೆ. ಹಿಂದೆಲ್ಲ ಮೀನುಗಾರರಿಕೆ ತೆರಳಿದಾಗ ಮೀನುಗಾರರು ನಾಪತ್ತೆಯಾದದಲ್ಲಿ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ ಆದರೆ ನಾನು ನಮ್ಮ ಮೀನುಗಾರರ ಕುಟುಂಬದ ಜೊತೆಯಲ್ಲಿ ನಿಂತು ನಾಪತ್ತೆಯಾದ ಮೀನುಗಾರರಿಗೂ ಪರಿಹಾರ ನೀಡುವುದರ ಜೊತೆಯಲ್ಲಿ ಪರಿಹಾರದ ಮೊತ್ತವನ್ನು ಕೂಡಾ ₹10 ಲಕ್ಷ ರುಪಾಯಿಗೆ ಹೆಚ್ಚಿಸಿದ್ದೆನೆ. ಅಲ್ಲದೆ ಮೀನುಗಾರಿಕೆ ತೆರಳಿದಾಗ ಮೀನುಗಾರರು ಅಪಘಾತಕ್ಕಿಡದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುವುದರ ಜೊತೆಗೆ ಮೀನುಗಾರಿಕೆ ಬೊಟ್‘ಗಳು ಹಾನಿಯಾದಲ್ಲಿ ಅದಕ್ಕೂ ಪರಿಹಾರಕೊಡಿಸುವ ಕೆಲಸ ಮಾಡಿದ್ದೇನೆ. ವಸತಿ ರಹಿತ ಬಡ ಮೀನುಗಾರರಿಗೆ ಮತ್ಸ್ಯಆಶ್ರಯ”ಯೋಜನೆಯಡಿಯಲ್ಲಿ ಮೀನುಗಾರರಿಗೆ ಮನೆಗಳನ್ನು ನಮ್ಮ ಇಲಾಖೆಯಿಂದ ನಿರ್ಮಿಸಿಕೊಡಲಾಗಿದೆ. ನಮ್ಮ ಸರಕಾರ ನಮ್ಮ ಇಲಾಖೆ ಇನ್ನು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸದಾ ಮೀನುಗಾರರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು.
ಸಂಘದ ಕಲಾಸಿಗಳಿಗೆ (ಕಾರ್ಮಿಕರು ) ಯಾವುದೇ ತೊಂದರೆಯಾದರೆ ಅವರ ಕ್ಷೇಮಕ್ಕಾಗಿ ಸಂಘಕ್ಕೆ ವಯಕ್ತಿಕವಾಗಿ ₹5 ಲಕ್ಷ ರೂಪಾಯಿ ಸಹಾಯ ಹಣವನ್ನು ನೀಡಿ ಸಂಘದ ಎಲ್ಲ ಕಲಾಸಿಗಳಿಗೂ ಇಂದರಿಂದ ಸಹಾಯ ಆಗುವಂತಾಗಲಿ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವೇಧಿಕೆಯ ಉತ್ತರಕನ್ನಡ ಜಿಲ್ಲಾ ಮೀನುಗಾರರ ಮುಖಂಡರಾದ ಶ್ರೀ ಗಣಪತಿ ಮಾಂಗ್ರೆ, ಡಿಪ್ ಸಿ ಟ್ರಾಲ್ ಬೊಟ್ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಕರುಣಾಕರ ಸಾಲಿಯನ್, ಡಿಪ್ ಸಿ ಟ್ರಾಲ್ ಬೊಟ್ ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ರವಿರಾಜ್ ಸುವರ್ಣ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತಸರರು ಶ್ರೀ ತಿಮ್ಮಪ್ಪ ಹೊನ್ನಿಮನೆ, ಹಾಗೂ ಮೀನುಗಾರ ಮುಖಂಡರು ಗಣ್ಯರು ಜೊತೆಗೆ ಕಲಾಸಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.