ಭಟ್ಕಳ-ಭಟ್ಕಳ ಕಳೆದ ಒಂದುವರೆ ತಿಂಗಳ ಹಿಂದೆ ಭಟ್ಕಳದ ಮುಂಡಳ್ಳಿ ಗ್ರಾಮದ ನೀರ್ ಗದ್ದೆ ಎಮ್ಮೆ ತಲೆ ಕಡಿದು ಹೋದ ಪ್ರಕರಣ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಮ್ಮೆ ತಲೆ ಕಡಿದ್ದರಿಂದ ಬಡ್ಕಳದಲ್ಲಿ ಮತ್ತೆ ಅಶಾಂತಿ ಉಂಟಾಗಬಹುದೆಂದು ಎಚ್ಚೆತ್ತ ಕೊಂಡ ಪೊಲೀಸ್ ಇಲಾಖೆ ಕೂಡಲೇ ತನಿಖೆ ಮಾಡಲು ಪ್ರತ್ಯೇಕ ತಂಡವನ್ನ ರಚನೆ ಮಾಡಿ ತನಿಖೆ ಆರಂಭಿಸಿದರು. ಪ್ರಕರಣದ A1ಆರೋಪಿ ಅಬ್ದುಲ್ ಅಲಿಂ ಸಾವುದ್ದೀನ್ ಜಬಾಲಿ ಕಳೆದ ಒಂದುವರೆ ತಿಂಗಳಿನಿಂದ ತಲೆಮರಿಸಿಕೊಂಡಿದ್ದನು ನಿನ್ನೆಯ ದಿನ ಬೆಂಗಳೂರಿನ ಆರ್ ಟಿ ನಗರ ದಲ್ಲಿ ಈತನನ್ನು ವಶಕ್ಕೆ ಪಡೆದು ಸೋಮವಾರ ಭಟ್ಕಳಕ್ಕೆ ಕರೆತಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಆರೋಪಿತನಿಂದ ಕೃತ್ಯಕ್ಕೆ ಬಳಸಲಾದ ಎರಡು ಬೈಕ್ ಗಳನ್ನು ವಸಪಡಿಸಿಕೊಳ್ಳಲಾಗಿದೆ. ಈತನ ಪತ್ತೆಗೆ ಠಾಣೆಯ ಏಎಸ್ಐ ರಾಜೇಶ್ ಮತ್ತು ನಾರಾಯಣ ಹಾಗೂ ಶ್ರೀಪಾದ್ CHC485 ಮತ್ತು ವಿನೋದ್ ಕುಮಾರ್Pc692 ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ರಿಂದ ಹೊಗಳಿಕೆ ವ್ಯಕ್ತವಾಗಿದೆ.