ಭಟ್ಕಳ-ಭಟ್ಕಳದ ವಿವಿಧ ಗೂಡಂಗಡಿಗಳಲ್ಲಿ ಮಟ್ಕಾ ದಂಧೆ ಜೋರಾಗಿದ್ದು, ಈ ದಂಧೆ ಹಿಂದಿರುವ ವ್ಯಕ್ತಿಯನ್ನು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ ಮಂಜುನಾಥ ಲಿಂಗರೆಡ್ಡಿ ಪತ್ತೆ ಮಾಡಿದ್ದಾರೆ ಕೇಸ್ ದಾಖಲಿಸಿದ್ದಾರೆ.
ಹೆಬಳೆಯ ತೆಂಗಿನಗುoಡಿಯಲ್ಲಿ ಓಸಿ ಆಡಿಸುತ್ತಿದ್ದ ಜನಾರ್ಧನ ನಾಯ್ಕ ಅವರನ್ನು ವಿಚಾರಿಸಿದಾಗ ಅವರು ಮಟ್ಕಾ ಬುಕ್ಕಿಯ ಹೆಸರು ಬಾಯ್ಬಿಟ್ಟಿದ್ದಾರೆ. ಅದರ ಪ್ರಕಾರ ಪಿಎಸ್‌ಐ ಮಂಜುನಾಥ ಲಿಂಗರೆಡ್ಡಿ ಅವರು ಜನಾರ್ಧನ ನಾಯ್ಕ ಅವರ ಜೊತೆ ಮಟ್ಕಾ ಬುಕ್ಕಿ ರೂಪೇಶ ನಾಯ್ಕ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಭಟ್ಕಳ ಜಾಲಿ ಬಳಿಯ ತಲಗೇರಿಯ ರೂಪೇಶ ನಾಯ್ಕ ಅವರು ಮಟ್ಕಾ ಆಟದ ಮೂಲಕ ಜನರಿಂದ ಹಣ ಸಂಗ್ರಹಿಸಿಕೊಟ್ಟರೆ ಕಮಿಷನ್ ನೀಡುವುದಾಗಿ ಜನಾರ್ಧನ ನಾಯ್ಕ ಅವರಿಗೆ ಆಮೀಷ ಒಡ್ಡಿದ್ದರು. ಹೀಗಾಗಿ ಗೂಡಂಗಡಿನಡೆಸುವ ಜನಾರ್ಧನ ನಾಯ್ಕ ಅವರು 1ರೂಪಾಯಿಗೆ 80ರೂ ನೀಡುವುದಾಗಿ ಜನರಿಂದ ಹಣ ಸಂಗ್ರಹಿಸಿದ್ದರು. ಸಂಗ್ರಹಿಸಿದ ಹಣವನ್ನು ರೂಪೇಶ ನಾಯ್ಕ ಅವರಿಗೆ ಕೊಡುವುದನ್ನು ಅವರು ರೂಢಿಸಿಕೊಂಡಿದ್ದರು.
ಅಗಸ್ಟ 16ರ ಸಂಜೆ ಹೆಬಳೆ ಗ್ರಾಮದ ಗಾಂಧೀನಗರ ಕ್ರಾಸಿನ ಬಳಿ ಜನಾರ್ಧನ ನಾಯ್ಕ ಮಟ್ಕಾ ಚೀಟಿ ಬರೆಯುತ್ತಿರುವಾಗ ಸಿಕ್ಕಿಬಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದ ಜನಾರ್ಧನ ನಾಯ್ಕ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಆಗ ರೂಪೇಶ ನಾಯ್ಕ ಅವರ ನೈಜರೂಪ ಹೊರಬಂದಿದ್ದು, ಕಾನೂಜರುಗಿಸಿದರ ಮಟ್ಕಾ ಆಟ ಆಡುತ್ತಿದ್ದ ಇಬ್ಬರ ವಿರುದ್ಧವೂ ಪೊಲೀಸರು ಕ್ರಮ ಕೇಸ್ ದಾಖಲಿಸಿದರು.