ಶಿರಸಿ: ಸಿರಸಿಯ ಗಾಂಧಿ ನಗರದ ರಿಕ್ಷಾ ಚಾಲಕ ಸಿಮೋನ್ ಮನೆ ವಿದ್ಯುತ್ ಅವಘಡದಿಂದಾಗಿ ಸುಟ್ಟು ಹೋಗಿದ್ದು, ಅವರ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಧನ ಸಹಾಯ ಮಾಡಿದರು.
ಈ ವೇಳೆ ಕುಟುಂಬಸ್ಥರೊಡನೆ ಸಾಂತ್ವನದ ನುಡಿಗಳನ್ನಾಡಿದ ಅವರು, ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಿದ್ದಾಗ ಈ ರೀತಿ ಅವಘಡ ಆದಾಗ ದೊಡ್ಡ ಮೊತ್ತದ ಪರಿಹಾರ, ಸಹಾಯ ಸರಕಾರದಿಂದ ಸಂತ್ರಸ್ತರಿಗೆ ಬರುತ್ತಿತ್ತು, ಈಗ ಒಂದು ರೂಪಾಯಿ ಕೂಡಾ ಬರುತ್ತಿಲ್ಲ, ಬಡವರು ಸಹಾಯಕ್ಕೆ ಎಲ್ಲಿಗೆ ಹೋಗಬೇಕು? ಬಡವರ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ನಡೆಯನ್ನು ನಾವೆಲ್ಲ ಒಗ್ಗಟ್ಟಾಗಿ ಪ್ರಶ್ನಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ಹೆಚ್ಚು ಪ್ರಯತ್ನ ಮಾಡಿ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಸರಕಾರದಿಂದ ಬರಬೇಕಾಗಿರುವ ಪರಿಹಾರಕ್ಕೆ ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಜೊತೆಗಿದ್ದರು.