ಭಟ್ಕಳ- ಸೋಮವಾರ ಮದ್ಯಾಹ್ನ ಧಗ ಧಗನೆ ಹೊತ್ತಿ ಹೊರಿದ ತರಕಾರಿ ಅಂಗಡಿ.ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಗ್ರಾಮೀಣ ಪೊಲೀಸ್ ಠಾಣೆ ಸಮಿಪದಲ್ಲಿ ಈ ಘಟನೆ ನೆಡೆದಿದೆ.
ಖಾಸಿಮ್ ಫ್ರೂಟ್ಸ್ ಆಂಡ್ ವೆಜಿಟೇಬಲ್ ಮಳಿಗೆ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಹಣ್ಣು ತರಕಾರಿಗಳು ಸುಟ್ಟು ಕರಗಿಹೋಗಿದೆ.
ಸ್ಥಳಕ್ಕೆ ಭಟ್ಕಳ ಹಾಗೂ ಉಡುಪಿ ಜಿಲ್ಲೆಯ ಅಗ್ನಿಶಾಮಕ ಸಿಬ್ಬಂದಿ ,ಭಟ್ಕಳ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಗ್ನಿ ಶಾಮಕ ದಳದರವರು ಬೆಂಕಿ ನಂದಿಸಲು ಹರಸಾಹಸ. ಪಟ್ಟರು ,ನಂದದ ಬೆಂಕಿ. ಕೊನೆಗೆ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.