ಭಟ್ಕಳ-ಭಟ್ಕಳ ಪುರಸಭೆಯ ಅಂಗಡಿ ಮಳಿಗೆಗಳ ಬಡ ಬಾಡಿಗೆಗಾರರನ್ನು ಒಕ್ಕಲೆಬ್ಬಿಸುವ ವಿಫಲ ಯತ್ನದ ಮಾದರಿಯಲ್ಲಿ ಈಗ ಬಡ ಮೀನು ವ್ಯಾಪಾರಿಗಳನ್ನು ಭಟ್ಕಳ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಕಾರಣಕ್ಕೂ ಸ್ಥಳಾಂತರ ಮಾಡವು ಮುಲ್ಸ್ಕ ಒಕ್ಕಲೆಬ್ಬಿಸುವ ವಿಫಲ ಯತ್ನ ಮಾಡುತ್ತಿರುವ ಕಾರ್ಯಕ್ಕೆ ಭಟ್ಕಳ ಪುರಸಭೆಯ ವಿರುದ್ಧ ಭಟ್ಕಳದ ಹಿಂದೂ ಪರ ಹೋರಾಟಗಾರ, ಭಟ್ಕಳದ ಹಿಂಧೂ ಹುಲಿ ಶಂಕರ ನಾಯ್ಕ ಚೌತನಿ ಭಟ್ಕಳ ತಮ್ಮ ಆಕ್ರೋಶ ಹಾಕಿ ಗುಡುಗಿದ್ದಾರೆ.
ಅಂದು ಭಟ್ಕಳ ಪುರಸಭೆಯು ಭಟ್ಕಳದ ಪುರಸಭೆಯ ಅಂಗಡಿ ಮಳಿಗೆಗಳ ಬಡ ಬಾಡಿಗೆದಾರರನ್ನು ಒಕ್ಕಲೆಬ್ಬಿಸಲು ವಿಫಲ ಯತ್ನವನ್ನು ನಡೆಸಿತ್ತು.ಭಟ್ಕಳ ಪುರಸಭೆಯ ಈ ಏಕಪಕ್ಷೀಯ ನಿರ್ಣಯದಿಂದಾಗಿ ಬಡ ಬಾಡಿಗೆದಾರನೊಬ್ಬ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದ.
ಆತನ ಸಾವಿಗೆ ಹಾಗೂ ಆತನ ಕುಟುಂಬಕ್ಕೆ ಈವರೆಗೂ ನ್ಯಾಯ ಹಾಗೂ ಪರಿಹಾರವೂ ಸಿಕ್ಕಿಲ್ಲಾ.
ಈಗ ಮತ್ತದೇ ಚಾಳಿಯನ್ನು ಮುಂದುವರಿಸಿರುವ ಭಟ್ಕಳ ಪುರಸಭೆಯು ಬಡ ಮೀನು ವ್ಯಾಪಾರಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಂಡಿದೆ.
ಈ ಮೂಲಕ ಭಟ್ಕಳ ಪುರಸಭೆಯು ಬಡ ಮೀನು ವ್ಯಾಪಾರಿಗಳ ತುತ್ತಿನ ಬುತ್ತಿಯನ್ನು ಕಸಿಯಲು ಹೊರಟಿದ್ದಲ್ಲದೇ ಮೀನು ವ್ಯಾಪಾರ ಕೇಂದ್ರದ ಸುತ್ತಮುತ್ತಲಿನ ಸಾವಿರಾರು ದಿನಗೂಲಿ ನೌಕರರು ಆಟೋ ಚಾಲಕರು ಬಾಡಿಗೆ ವಾಹನಗಳ ಚಾಲಕರು ಮಾಲೀಕರು ತರಕಾರಿ ವ್ಯಾಪಾರಸ್ಥರು ಸೇರಿದಂತೆ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆಯಲು ಹೊರಟಿದೆ.
ಇದೊಂದು ಭಟ್ಕಳ ಪುರಸಭೆಯ ಹಿಟ್ಲರ ಮಾದರಿಯ ಸಾಮ್ರಾಜ್ಯಶಾಹಿ ಧೋರಣೆಯಾಗಿದ್ದು ಇದನ್ನು ಒಪ್ಪಲು ಸಾಧ್ಯವಿಲ್ಲಾ.ಆದ್ದರಿಂದ ಭಟ್ಕಳ ಪುರಸಭೆಯು ಈ ಕೂಡಲೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಡ ಮೀನು ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಮೀನು ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಮೀನು ವ್ಯಾಪಾರ ಮಾಡುವ ಭಟ್ಕಳ ಪುರಸಭೆಯ ಈ ಹಳೇ ಕಟ್ಟಡವನ್ನು ಕೆಡವಿ ನವೀಕರಿಸುವ ಯೋಜನೆಯನ್ನು ಭಟ್ಕಳ ಪುರಸಭೆಯು ಹೊಂದಿದ್ದರೆ ಅದೇ ಸ್ಥಳದಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸುವ ಭರವಸೆಯನ್ನು ನೀಡಿ ಹೊಸ ಕಟ್ಟಡದ ನೀಲನಕ್ಷೆಯನ್ನು ಮೀನು ವ್ಯಾಪಾರಿಗಳ ಮುಂದೆ ಹಾಜರುಪಡಿಸಬೇಕಾಗಿ ಆಗ್ರಹಿಸಿದ್ದಾರೆ.ಇದನ್ನು ಬಿಟ್ಟು ಭಟ್ಕಳದ ಬಡ ಮೀನು ವ್ಯಾಪಾರಿಗಳನ್ನು ಅಲ್ಲಿಂದ ಬಲವಂತವಾಗಿ ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದರೆ ಭಟ್ಕಳ ಪುರಸಭೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗುಡುಗಿದ್ದಾರೆ.