ಭಟ್ಕಳ-ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ನಿರಗದ್ದೆಯ ಸವಿತಾ ಸೋಮಯ್ಯ ನಾಯ್ಕ ಎಂಬ ಮಹಿಳೆ ತಮ್ಮ 32ನೇ ವಯಸ್ಸಿನಲ್ಲಿ ಈ ಲೋಕ ಬಿಟ್ಟು ಹೋಗಿದ್ದಾರೆ. ಈಕೆಯ ಗಂಡ ಸೋಮಯ್ಯ ನಾಯ್ಕ ಅವರ ಸಂಶಯದ ಸ್ವಭಾವ, ಕಿರುಕುಳ ಸಹಿಸಲಾಗದೇ ಸವಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸವಿತಾ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯ ನಿವಾಸಿಯಾಗಿದ್ದರು. ಅದೇ ಊರಿನ ಸೋಮಯ್ಯ ನಾಯ್ಕ ಅವರ ಜೊತೆ ಸವಿತಾ ನಾಯ್ಕ ಅವರ ಮದುವೆಯಾಗಿತ್ತು.. ಸೋಮಯ್ಯ ನಾಯ್ಕ ಅವರು ಸೆಂಟ್ರಿoಗ್ ಕೆಲಸ ಮಾಡಿಕೊಂಡು ತಮ್ಮ ಜೀವನ ಕಟ್ಟಿಕೊಂಡಿದ್ದರು, ಸವಿತಾ ನಾಯ್ಕ ಅವರು ಸಹ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಇಬ್ಬರ ದುಡಿಮೆಯಿಂದ ಅವರ ಸಂಸಾರ ದೋಣಿ ಸಾಗುತ್ತಿತ್ತು.
ಆದರೆ ಪತಿ ಸೋಮಯ್ಯ ನಾಯ್ಕ ಅವರ ತಲೆಯೊಳಗೆ ಪತ್ನಿ ಬಗ್ಗೆ. ಸದಾ ಸಂಶಯ ಮೂಡಿತು. ಅದೇ ಅನುಮಾನದ ಮೇರೆಗೆ ಸವಿತಾ ನಾಯ್ಕ ಅವರನ್ನು ಪೀಡಿಸಲು ಶುರು ಮಾಡಿ ಸದಾ ಕಿರುಕುಳ ನೀಡುತ್ತಿದ್ದರು.ಮದುವೆ ಆದ ದಿನದಿಂದಲೂ ಕಾಡುತ್ತಿದ್ದ ಸಂಶಯ ಕ್ರಮೇಣ ಹೆಚ್ಚಾಗಿದ್ದು, ನಿತ್ಯವೂ ಪತ್ನಿಗೆ ಕಿರುಕುಳ ನೀಡುವುದನ್ನು ರೂಢಿಸಿಕೊಂದಿದ್ದರು. ಇದರಿಂದ ಸವಿತಾ ನಾಯ್ಕ ಅವರು ಮಾನಸಿಕ ಹಿಂಸೆಯ ಜೊತೆ ದೈಹಿಕವಾಗಿಯೂ ನೋವು ಅನುಭವಿಸಿದರು.
ಇಷ್ಟು ದಿನಗಳ ಕಾಲ ಪತಿಯ ಕ್ರೌರ್ಯ ಸಹಿಸಿಕೊಂಡಿದ್ದ ಸವಿತಾ ನಾಯ್ಕ ಅವರಿಗೆ ಇನ್ಮುಂದೆ ಅದನ್ನು ಸಹಿಸಿಕೊಳ್ಳುವ ಸಹನೆ ಇರಲಿಲ್ಲ. ಆ ಕಿರುಕುಳ ಅನುಭವಿಸುವುದಕ್ಕಿಂತಲೂ ಸಾವೇ ಉತ್ತಮ ಎಂದು ನಿರ್ಧರಿಸಿ ಅವರು ದುಡುಕಿನ ನಿರ್ಧಾರ ಮಾಡಿದರು. ಅಗಸ್ಟ 28ರ ರಾತ್ರಿ 9 ಗಂಟೆ ನಂತರ ಅವರು ಮನೆಯಲ್ಲಿದ್ದ ದುಪ್ಪಟ್ಟವನ್ನು ಉರುಳು ಮಾಡಿಕೊಂಡು ನೇಣಿಗೆ ಶರಣಾದರು. ತಂಗಿ ಸಾವಿನ ಬಗ್ಗೆ ಅರಿತ ಮೋಹನ ನಾಯ್ಕ ಅವರು ಅಲ್ಲಿಗೆ ಧಾವಿಸಿ ಬಂದರು. ಸವಿತಾ ನಾಯ್ಕ ಅವರು ಅನುಭವಿಸಿದ ಯಾತನೆ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ವಿವರಿಸಿದರು. ಸೋಮಯ್ಯ ನಾಯ್ಕ ಅವರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದಾರೆ.ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.
