ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ನಿನ್ನೆಯಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಜಿಲ್ಲಾ ಅಧ್ಯಕ್ಷ ಶಂಕರ ನಾಯ್ಕ ನೇತೃತ್ವದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿಯನ್ನು ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನಾಕಾರನ್ನು ಇಂದು ಸಂಜೆ ಭಟ್ಕಳ ತಾಲೂಕ ಆಡಳಿತದ ಸೂಚನೆ ಮೇರೆಗೆ ಪೊಲೀಸರು ಬಂಧಿಸಿ , ನಂತರ ಬಿಡುಗಡೆಗೊಳಿಸಿದರು. ಈ ಮೂಲಕ ತಾಲೂಕ ಆಡಳಿತ ಪ್ರತಿಭಟನೆ ಯನು ತಡೆಯಿತು.ಇಂದು ಮಧ್ಯಾಹ್ನ ಭಟ್ಕಳ ತಾಲೂಕ ಆಡಳಿತ ಭಟ್ಕಳ ಅತಿಸೂಕ್ಷ ಪ್ರದೇಶ ಮತ್ತು ಕಾನೂನು ಸುವ್ಯವಸ್ಥೆಯ ನೆಪ ಒಡ್ಡಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸುವಂತೆ ಆದೇಶಿಸಿ ಭಟ್ಕಳ ನಗರ ಕಂದಾಯ ನಿರೀಕ್ಷಕರ ಮೂಲಕ ನೋಟಿಸ್ ಜಾರಿ ಮಾಡಲು ತಾಲೂಕ ಆಡಳಿತ ಮುಂದಾಗಿತ್ತು. ಆದರೆ ನೋಟಿಸ ತೆಗೆದುಕೊಳ್ಳಲು ಪ್ರತಿಭಟನಾ ನಿರತರು ನಿರಾಕರಿಸಿದ ಹಿನ್ನಲೆಯಲ್ಲಿ ಅಲ್ಲೇ ಪಕ್ಕದ ಗೋಡೆಗೆ ಅಧಿಕಾರಿಗಳು ನೋಟಿಸ್ ಅಂಟಿಸಿ ತೆರಳಿದರು.