ಭಟ್ಕಳ : ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 14 ರ ರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳು ಶಿರಾಲಿಯ ನಿವಾಸಿ ಹಸನ್ ಬ್ಯಾರಿ ಅವರ ಪುತ್ರ ಅಮೀರ್ ಮತ್ತು ಭಟ್ಕಳದ ನಿವಾಸಿ ಅಬ್ದುಲ್ ಗಫರ್ ಅವರ ಪುತ್ರ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳು ದೇವಸ್ಥಾನದ ಹುಂಡಿ ( ಕಾಣಿಗೆ ಹುಂಡಿ) ಒಡೆದು ಒಳಗೆ ಇಟ್ಟಿದ್ದ ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.ಅಪರಾಧಕ್ಕೆ ಬಳಸಲಾದ ಎರಡು ಮೋಟಾರ್ ಸೈಕಲ್‌ಗಳು ಸೇರಿದಂತೆ ₹2,21,295 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಅರೆಸ್ಟ್ ಮಾಡಿದ
ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶ ರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.