ಭಟ್ಕಳ: ತಾಲೂಕಿನ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿ. ಬೆಳಕೆ ಇದರ 73ನೇ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 19-09-2025 ರಂದು ಬೆಳಕೆಯಲ್ಲಿರುವ ಪ್ರಧಾನ ಕಚೇರಿಯ ಎಂ ಎಸ್ ನಾಯ್ಕ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ಮಾದೇವ್ ಗೋವಿಂದ ನಾಯ್ಕ್ ಇವರು ಮಾರ್ಚ್ 2025 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವರದಿಯನ್ನು ಮಂಡಿಸಿದರು.
ಸಂಘವು ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿನ ತೀವ್ರ ಪೈಪೋಟಿಯಲ್ಲೂ ಉತ್ತಮ ಪ್ರಗತಿ ಸಾಧಿಸಿ 2024 -25 ನೇ ಸಾಲಿನಲ್ಲಿ 82.35 ಲಕ್ಷ ನಿವ್ವಳ ಲಾಭಗಳಿಸಿದೆ ತಿಳಿಸಿದರು. 2024 -25ನೇ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 8385 ಜನ ಸದಸ್ಯರನ್ನು ಹೊಂದಿದ್ದು ಸಂಘದ ಶೇರು ಬಂಡವಾಳ ರೂ. 6 ಕೋಟಿ 4 ಲಕ್ಷ. ಸಂಘದ ಕಾಯ್ದಿಟ್ಟ ನಿಧಿ ಹಾಗೂ ಇತರ ನಿಧಿಗಳು ಸೇರಿ ರೂ. 11 ಕೋಟಿ 66 ಲಕ್ಷ ಇರುತ್ತದೆ ಠೇವಣಿ ಸಂಗ್ರಹಣೆ ರೂ. 74 ಕೋಟಿ 69 ಲಕ್ಷದಷ್ಟು ಇರುತ್ತದೆ. ಸಂಘದ ಸದಸ್ಯರಿಂದ ಬರತಕ್ಕ ಹೊರಬಾಕಿ ಸಾಲ ರೂ. 100 ಕೋಟಿ 86 ಲಕ್ಷ ಇರುತ್ತದೆ. ಸಂಘದ ದುಡಿಯುವ ಬಂಡವಾಳ 110 ಕೋಟಿ ಎರಡು ಲಕ್ಷ ಇರುತ್ತದೆ ಸಂಗವೂ 205 ಸ್ವಸಹಾಯ ಸಂಘಗಳನ್ನು ಹೊಂದಿದ್ದು ಅವುಗಳಿಂದ ರೂ. 54. 07 ಲಕ್ಷದಷ್ಟು ಠೇವಣಿಯನ್ನ ಸಂಗ್ರಹಿಸಿದೆ ಮತ್ತು ಪ್ರಸಕ್ತ ವರ್ಷದಲ್ಲಿ ರೂ. 83 ಲಕ್ಷ ಸಾಲ ವಿತರಿಸಿದ್ದು ವರ್ಷಾಂತಕ್ಕೆ 45 ಸ್ವಸಹಾಯ ಸಂಘಗಳಿಂದ ರೂ 1ಕೋಟಿ 57 ಲಕ್ಷದಷ್ಟು ಸಾಲ ಬರತಕ್ಕ ಹೊರಬಾಕಿ ಇರುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಂಘದ ಕಾರ್ಯಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಪಾಂಡು ಗೋವಿಂದ ನಾಯ್ಕ್ ನಿರ್ದೇಶಕರುಗಳಾದ ಶ್ರೀ ಲಕ್ಷ್ಮಿ ನಾರಾಯಣ ಮಂಜಯ್ಯನಾಯ್ಕ್ ಶ್ರೀ ನಾಗೇಶ್ ದಿ ನಾಯ್ಕ್ ಶ್ರೀ ದಾಮೋದರ್ ಹೊನ್ನಪ್ಪ ನಾಯ್ಕ್ ಲೋಕೇಶ್ ಮಂಜಪ್ಪನಾಯ್ಕ್ ರವಿರಾಜ್ ಜೈನ್ ಮಂಜು ಮಂಜು ಮುಗೇರ್ ಭಾಸ್ಕರ್ ನಾರಾಯಣಗೊಂಡ, ಶ್ರೀಮತಿ ಲಲಿತಾ ಶ್ರೀಮತಿ ಶಾರದಾ ಚಂದ್ರ ನಾಯ್ಕ್, ಶ್ರೀಮತಿ ಭಾರತೀಯ ರವಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಅಣ್ಣಪ್ಪ ಎನ್ ನಾಯ್ಕ್ ಎಲ್ಲರನ್ನೂ ಸ್ವಾಗತಿಸಿದರು. ಸಂಘದ ಶಾಖಾ ವ್ಯವಸ್ಥಾಪಕರಾದ ಶ್ರೀ ನಾಗೇಶ್ ಎಂ ನಾಯ್ಕ್ ವoದಿಸಿದರು.