ಭಟ್ಕಳ: ಸಮುದ್ರದ ಅಲೆಯ ಅಬ್ಬರಕ್ಕೆ ಎಂಟು ವರ್ಷದ ಬಾಲಕ ಬಲಿಯಾದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ನಡೆದಿದೆ.ಕೃತಿಕ್ (8) ಅಲೆಯ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕ
ಬೆಂಗಳೂರು ಬಿದರಳ್ಳಿಯ ಕೆ. ರವಿ ರೆಡ್ಡಿ ತಮ್ಮ ಕುಟುಂಬ ಸಮೇತ ನಿನ್ನೆ ರಾತ್ರಿ ಮುರ್ಡೇಶ್ವರಕ್ಕೆ ಬಂದು ತಂಗಿದ್ದರುಇಂದು ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಆಡ್ತಿದ್ದಾಗ ಭಾರೀ ಅಲೆ ಅಪ್ಪಳಿಸಿತ್ತು ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದರು.ಅಲೆಯಲ್ಲಿ ಸಿಲುಕಿದ ವಸಂತಾ ಕೆ. (27), ಅಸ್ವಸ್ಥರಾಗಿ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ರವಿ ರೆಡ್ಡಿಯ ಕಿರಿಯ ಮಗ ಕೃತಿಕ್ ಸಾವನ್ನಪ್ಪಿದ್ದಾನೆ. ಈ ಘಟನೆಯ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.