ಕಾರವಾರ-ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ವೀರ ಯೋಧ ಹುತಾತ್ಮ ಸ್ಮಾರಕಕ್ಕೆ ಹೋಗುವ ಹೋಗುವ ರಸ್ತೆಗೆ ನೂತನವಾಗಿ ವಿನೋದ ನಗರ ಎಂಬ ನಾಮಕರಣ ಮಾಡಿ ಕಡವಾಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದು ಆರ್ ನಾಯ್ಕ ಅವರು ನೂತನ ನಾಮಫಲಕಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ವೀರ ಹುತಾತ್ಮ ಯೋಧ ವಿನೋದ ನಾಯ್ಕ ಅವರ ಸ್ಮಾರಕಕ್ಕೆ ಹೋಗುವ ರಸ್ತೆಗೆ ನೂತನವಾಗಿ ವಿನೋದ ನಗರ ಎಂಬ ನಾಮಕರಣ ಮಾಡಲಾಗಿದೆ. ಈ ಒಳ್ಳೆಯ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ನಾಗರಿಕರಿಗೆ ಧ್ಯನವಾದಗಳು ಅರ್ಪಿಸುತ್ತೇನೆ. ಕಡವಾಡ ಗ್ರಾಮದಲ್ಲಿ ಜೀವ ಮಾನದಲ್ಲಿ ಇಂಥ ಮಹಾನ್ ಕಾರ್ಯಕ್ರಮ ಮಾಡಿದ ವೀರ ಹುತಾತ್ಮ ಸ್ಮಾರಕ ಅಡಿಗಲ್ಲು ಸಮಾರಂಭ ನಂತರ ನೂತನ ಸ್ಮಾರಕ ಉದ್ಘಾಟನೆ ಈಗ ರಸ್ತೆ ನಾಮಕರಣ ಇರಬಹುದು ನಮ್ಮ ಅಲ್ಪ ಅವಧಿಯಲ್ಲಿ ಇಂಥ ದೇಶ ಸೇವೆಯ ಮಹಾನ್ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು ನೀಜಕ್ಕೂ ಪುಣ್ಯ ಕೆಲಸ. ಮುಂದಿನ ದಿನಗಳಲ್ಲಿಯೂ ಊರಿನ ಜನರ ಸಲಹೆ ಸಹಕಾರದೊಂದಿಗೆ ಕಡವಾಡ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ರೀತಿಯಲ್ಲೂ ಶ್ರಮಿಸುತ್ತೇನೆ ಎಂದರು. ಹೆಸ್ಕಾಂ ಗುತ್ತಿಗೆದಾರರಾದ ರಾಜೇಶ ಕೃಷ್ಣಾ ಭೋವಿ ಅವರ ನೇತೃತ್ವದಲ್ಲಿ ಗ್ರಾಮದ ನಾಗರಿಕರು ಸೇರಿ ನೂತನ ರಸ್ತೆಗೆ ವಿನೋದ ನಗರ ಎಂಬ ನಾಮಕರಣ ಮಾಡಬೇಕೆಂದು ಗ್ರಾ ಪಂ ಅಧ್ಯಕ್ಷರಾದ ಆನಂದು ಆರ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಹುತಾತ್ಮ ಯೋಧರಾದ ವಿನೋದ ನಾಯ್ಕ ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳು ನಿರ್ಮಾಣ ಆಗಿವೆ. ಇನ್ನು ಕೆಲವು ನಾಗರಿಕರು ತಮ್ಮ ಮನೆಗಳು ನಿರ್ಮಾಣ ಮಾಡುವುದು ಇದೆ.ಅಷ್ಟೆಯಲ್ಲದೇ ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿದ್ದ ವೇಳೆ ವೀರ ಮರಣವನ್ನಪ್ಪಿದ್ದ ವೀರ ಹುತಾತ್ಮ ಲ್ಯಾನ್ಸ್ ನಾಯಕ ವಿನೋದ ನಾಯ್ಕ ಸ್ಮಾರಕ ಈ ಭಾಗದ ಭೂ ಮಾತೆಯ ಒಡಲಿನಲ್ಲಿ ನಿರ್ಮಾಣವಾಗಿದೆ. ಈ ಹುತಾತ್ಮ ಯೋಧನ ಉಸಿರು ಸ್ಮಾರಕದಲ್ಲಿ ಚಿರಾಯು ಆಗಿ ಉಳಿದಿದೆ. ದೇಶಕ್ಕೆ ಸಲ್ಲಿಸಿದ ಸೇವೆ ಶೌರ್ಯ ತ್ಯಾಗ ಬಲಿದಾನ ಕಣಗಳಲ್ಲಿ ದೇಶ ಪ್ರೇಮದ ಸಂಕೇತವಾಗಿದ್ದು . ಮತ್ತು ಸಾಕಷ್ಟು ಈ ಭಾಗದ ನಾಗರಿಕರ ವಿನೋದ ನಗರ ಎಂಬ ನಾಮಕರಣ ಮಾಡಬೇಕೆಂದು ಅಭಿಲಾಷೆ ಆಗಿತ್ತು ಎಂದು ನಾಗರಿಕರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದು ಆರ್ ನಾಯ್ಕ ಶಶಿಕಾಂತ ಅಂಕೋಲೆಕರ ಕನ್ನಡ ಶಾಲೆ ಕೆರವಡಿ ಮುಖ್ಯೋಪಾಧ್ಯಾಯರು ರಾಜೇಶ ಕೃಷ್ಣಾ ಭೋವಿ ಹೆಸ್ಕಾಂ ಗುತ್ತಿಗೆದಾರರು ದೀಪಕ ಮಾಜ್ರೇಕರ ಗೋವಿಂದ ನಾಯ್ಕ ಪ್ರದೀಪ ಕಡವಾಡಕರ ಸಂತೋಷ ದುದಾಳಕರ ರಾಜು ಕಳಸ ಗಜಾನನ ಕಲ್ಕುಕರ ಗ್ರಾ ಪಂ ಸದಸ್ಯ ಕಿಶೋರ ಕಡವಾಡಕರ ಹರೀಶ ಕಡವಾಡಕರ ಹಾಗೂ ವೀರ ಹುತಾತ್ಮ ತಂದೆ ತಾಯಿಯಾದ ಮಹಾದೇವ ಡಿ ನಾಯ್ಕ ಗೀತಾ ಎಮ್ ನಾಯ್ಕ ಕರವೇ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.