ಭಟ್ಕಳ: ಭಟ್ಕಳದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಭಯಾನಕ ರೂಪದ ವಿಚಿತ್ರ ಹೆಣ್ಣು ಶಿಶು ಜನನವಾಗಿದ್ದು, ಆ ಹೆಣ್ಣು ಮಗುವನ್ನು ನೋಡಿದವರು ಬೆಚ್ಚಿಬೀಳುವಂತಾಗಿದೆ. ಮಗುವಿನ ಸ್ವರ, ಅಳು ಸಾಮಾನ್ಯ ಶಿಶುಗಳ ಹಾಗೆ ಇದ್ದು ದೈಹಿಕ ರೂಪ ಮಾತ್ರ ಸೃಷ್ಟಿಯ ವೈಚಿತ್ರ್ಯಕ್ಕೆ ಬೆರಗಾಗುವಷ್ಟು ಸಂಚಲನವನ್ನುಂಟು ಮಾಡಿದೆ.
ಭಟ್ಕಳದಲ್ಲಿ ಕೆಲವು ವರ್ಷಗಳ ಹಿಂದೆ ವಾಸ್ತವ್ಯ ಹೂಡಿರುವ ಮುಸ್ಲಿಂ ದಂಪತಿಗಳ ಮೂರನೇ ಶಿಶುವೇ ಈ ರೀತಿಯ ವಿಚಿತ್ರ ರೂಪದಲ್ಲಿ ಜನಿಸಿದೆ ಎಂದು ಹೇಳಲಾಗಿದ್ದು ,ಭಟ್ಕಳದ ನರ್ಸಿಂಗ್ ಹೋಂ ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮಣಿಪಾಲದ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಗೆ ಮಗುವನ್ನು ದಾಖಲಿಸಲಾಗಿದೆ. ಶಿಶುವಿನ ಬಗ್ಗೆ ವಿವಿಧ ರೀತಿಯ ಕಾಮೆಂಟ್ ಗಳು ಕೇಳಿ ಬರುತ್ತಿದ್ದು ಮೊನ್ನೆ ಯಷ್ಟೇ ಜರಗಿದ ಚಂದ್ರ ಗ್ರಹಣ ಸಮಯದ ಪ್ರಭಾವ ಹಾಗೂ ಕಾಕತಾಳೀಯವೆಂಬಂತೆ ಅದೇ ಸಮಯದಲ್ಲಿ ಜನಿಸಿದ ಮಗುವಿನ ಜನನಕ್ಕೂ ತಾಳೆ ಹಾಕಲಾಗುತ್ತಿದೆ.
ಸದ್ಯಕ್ಕೆ ಮಗುವಿನ ಚಿಕಿತ್ಸೆ ಮಣಿಪಾಲ್ ಆಸ್ಪತ್ರೆಯಲ್ಲಿ ಮುಂದುವರಿದಿದೆ