ಭಟ್ಕಳ: ಶ್ರೀ ಪ್ರದೀಪ್ ಎಂ ನಾಯ್ಕ್ ಇವರು ಭಟ್ಕಳ ತಾಲೂಕಿನ ಮಾವಳ್ಳಿ 2 ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಡ್ಸುಳ್ ಗ್ರಾಮದ ನಿವಾಸಿಯಾಗಿರುವ ಇವರು ಉಪವಲಯ ಅರಣ್ಯಾಧಿಕಾರಿ- ಕಂ- ಮೋಜಣಿದಾರರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿನ ಇವರ ಗಣನೀಯ ಸಾಧನೆಯನ್ನು ಗುರುತಿಸಿ 2024ನೆಯ ಸಾಲಿಗೆ ಮುಖ್ಯಮಂತ್ರಿಗಳ ಪದಕ ವನ್ನು ದಿನಾಂಕ 8-10-25 ರಂದು ಪೂರ್ವ್ಹಾನ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವಟ್ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಪದಕ ಪ್ರಧಾನ ಮಾಡಿ ಗೌರವಿಸಿರುತ್ತಾರೆ.
ಪ್ರದೀಪ್ ನಾಯಕ್ ಇವರು ತುಂಗಾ ಜಲಾಶಯ ಪ್ರದೇಶದ 3,175 ಎಕರೆ 19 ಗುಂಟೆ ಭೂಮಿಯನ್ನು ರಕ್ಷಿತ ಅರಣ್ಯ ವೆಂದು ಘೋಷಿಸಲು ಪ್ರಸ್ತಾವನೆಗೆ ಬೇಕಾದ ನಕ್ಷೆಗಳು ಕಂದಾಯ ದಾಖಲೆಗಳು ಮತ್ತು ಕರಡು ಅಧಿಸೂಚನೆಯನ್ನ ಸಂಪೂರ್ಣವಾಗಿ ಸಿದ್ಧಪಡಿಸಿ ಅದು ಹೊರಡಿಸಲು ಕಾರಣರಾಗಿದ್ದಾರೆ. ಸಾಗರ ವಿಭಾಗದ ಕರಡು ಕಾರ್ಯಯೋಜನೆ ಸಿದ್ಧಪಡಿಕೆಗೆ ಅಗತ್ಯವಾದ ಕ್ಷೇತ್ರ ವಿವರಗಳನ್ನು ಸಂಗ್ರಹಿಸಿ ನಕ್ಷೆಗಳನ್ನ ತಯಾರಿಸಿ ಯೋಜನೆಯನ್ನ ಅಧಿಕಾರಸ್ಥ ಸಮಿತಿಯ ಮುಂದೆ ಮಂಡಿಸುವವರೆಗಿನ ತಾಂತ್ರಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಹಾಗೂ ಮತ್ತಿಕೊಪ್ಪ ಸೇರಿದಂತೆ 8ಕ್ಕೂ ಹೆಚ್ಚು ಅರಣ್ಯ ಬ್ಲಾಕ್ ಗಳಿಗೆ ಸಂಬಂಧಿಸಿದಂತೆ ಜಿಯೋ ರೆಫರೆನ್ಸ್ ನಕ್ಷೆಗಳನ್ನ ತಯಾರಿಸಿದ್ದಾರೆ ಅಲ್ಲದೆ ಜಿ. ಎಸ್.ಎಫ್. ಐ.ಎಸ್. ತಂತ್ರಾಂಶದಲ್ಲಿ 433 ಅಧಿಸೂಚಿತ ಅರಣ್ಯದ ಅಧಿಸೂಚನೆಗಳನ್ನು ಅಪ್ಲೋಡ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಈ ಸೇವೆಯು ಅರಣ್ಯದ ತಾಂತ್ರಿಕ ನಿರ್ವಹಣೆಗೆ ಗಣನೀಯ ಕೊಡುಗೆ ನೀಡಿದೆ. ಪ್ರದೀಪ್ ನಾಯಕ್ ಇವರ ಈ ಸಾಧನೆಯ ಗುರುತಿಸಿ ರಾಜ್ಯ ಸರಕಾರ ಮಾನ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಈಶ್ವರ್ ಬಿ ಖಂಡ್ರೆ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡಿದೆ. ಇವರು ಕೊಡ್ಸುಳ್ ನಿವಾಸಿಯಾದ ಮಾಸ್ತಪ್ಪ ನಾಯ್ಕ್ ಮತ್ತು ಗೌರಿ ನಾಯ್ಕ್ ದಂಪತಿಯ ಸುಪುತ್ರರಾಗಿರುತ್ತಾರೆ.