ಭಟ್ಕಳ: ತಾಲೂಕಿನ ಬಲ್ಸೆಯ ಸಚಿವರ ಮನೆಯಲ್ಲಿ ನಡೆದ ಭಟ್ಕಳ ತಾಲೂಕು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯರವರು ನಾನು ಹಣ ಅಥವಾ ಆಸ್ತಿ ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ ನನ್ನ ಕ್ಷೇತ್ರದ ಜನತೆಗೆ ಉದ್ಯೋಗ ಆರೋಗ್ಯ ನೀಡಲು ಬಂದಿದ್ದೇನೆ ನಾನು ಹಣ ಮಾಡುವುದಾದರೆ ಬೆಂಗಳೂರು ಅಥವಾ ವಿದೇಶಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ಹೂಡಿಕೆ ಮಾಡಬಹುದಿತ್ತು ಆದರೆ ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಏನಾದರೂ ಮಾಡುವ ಚಿಂತನೆಯಿಂದ ಭಟ್ಕಳ ಕ್ಷೇತ್ರದಲ್ಲಿ ಹತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನ ಅತಿ ಶೀಘ್ರದಲ್ಲಿ ಉದ್ಘಾಟಿಸಲಿದ್ದೇನೆ. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಇದು ಸಹಕಾರವಾಗುತ್ತದೆ ಎಂದರು.
ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಭಟ್ಕಳ ತಾಲೂಕಿನಲ್ಲಿ ಆಸ್ಪತ್ರೆ, ಮೆಡಿಕಲ್ ಕಾಲೇಜ್,, ನರ್ಸಿಂಗ್ ಕಾಲೇಜ್ ಸೇರಿದಂತೆ ವೈದ್ಯಕೀಯ ಹಬ್ ಮಾಡುವ ಉದ್ದೇಶದಿಂದ 30 ಎಕರೆ ಅರಣ್ಯ ಇಲಾಖೆಯ ಜಾಗವನ್ನು ಸರಕಾರಿ ನಿಯಮದಂತೆ ಕೇಳಿದ್ದೇನೆ ಎಂದು ಹೇಳಿದರು. ನಾನು 16ನೇ ವರ್ಷಕ್ಕೆ ದುಡಿಯಲು ಆರಂಭಿಸಿದ್ದೆ ಹೋಟೆಲ್ ಬಿಸಿನೆಸ್, ಜಮೀನು ವ್ಯಾಪಾರ, ಮೀನು ವ್ಯಾಪಾರ ಸೇರಿದಂತೆ ಹಲವಾರು ವ್ಯವಹಾರ ನಾನು ಮಾಡಿದ್ದೇನೆ ರಾಜಕೀಯ ನನಗೆ ಉದ್ಯೋಗವಲ್ಲ ಜನರಿಗೋಸ್ಕರ ಜನರಿಗಾಗಿ ಏನಾದರೂ ಮಾಡುವ ಹಂಬಲ ಅಷ್ಟೇ ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬೀನಾ ವೈದ್ಯ ಮಾತನಾಡಿ ಮತ್ತೊಂದು ಯಶಸ್ವಿ ಮಹಿಳಾ ಕಾರ್ಯಕ್ರಮ.
ಮಹಿಳೆಯರನ್ನು ಒಂದೆಡೆ ಒಟ್ಟುಗೂಡಿಸುವುದು ಕಷ್ಟ ಎಂದು ಹೇಳುತ್ತಿರುವವರಿಗೆ ಇದೆ ಉತ್ತರ. ಕ್ಷೇತ್ರದಲ್ಲಿ ಇನ್ನುಮುಂದೆ ಹೊಸ “ಯುಗ ಆರಂಭ “ ಮಹಿಳಾ ಕ್ರಾಂತಿ ಎಂದು ಹೆಮ್ಮೆಯಿಂದ ಹೇಳಲು ಇಚ್ಛೇಪಡುತ್ತೇನೆ. ನಮ್ಮ ತಾಲೂಕಿನ ಎಲ್ಲಾ ಮಹಿಳೆಯರು ಉದ್ಯೋಗ , ವ್ಯವಹಾರ,ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬೇಕು.ಎಂಬ ಹೊಸ ಹುಮ್ಮಸ್ಸಿನಲ್ಲಿ ಕೇವಲ ನಾನು ಮಾತ್ರ ಅಲ್ಲ ನನ್ನ ಜೊತೆ ಇರುವವರನ್ನು ಮುಂಚೂಣಿಯಲ್ಲಿ ತರುವ ನಂಬಿಕೆ ನನಗಿದೆ .ಅಂತೆಯೇ ಮಹಿಳಾ ಶಕ್ತಿಯೇ ದೇಶದ ಶಕ್ತಿ ಎನ್ನುವಂತೆ ಭಟ್ಕಳದ ಮಹಿಳಾ ಸಮಾಲೋಚನೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಪ್ರಶ್ನೆ ಹಾಗೂ ಎಂಡಿ ಪುಷ್ಪಲತಾ ವೈದ್ಯ ಮಾತನಾಡಿ ಹೆಣ್ಣು ಸಮಾಜದಲ್ಲಿ ತನ್ನ ಸಂಸಾರವನ್ನು ಹೇಗೆ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ ಸಂಸ್ಕಾರಯುತವಾಗಿ ಹೆಣ್ಣು ಬೆಳೆಯುತ್ತಾಳೆ ಅದೇ ರೀತಿ ಸಮಾಜವನ್ನು ಕೂಡ ಕಟ್ಟಬಲ್ಲರು ಸಮಾಜದಲ್ಲಿ ಉತ್ತಮ ಕೆಲಸವನ್ನು ಕೂಡ ಮಾಡಬಲ್ಲಳು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಟ್ಕಳ್ ಬ್ಲಾಕ್ ಅಧ್ಯಕ್ಷರು ವೆಂಕಟೇಶ್ ನಾಯ್ಕರವರು ,ಮಹಿಳಾ ಬ್ಲಾಕ್ ಅಧ್ಯಕ್ಷರು ನಯನ ನಾಯ್ಕ ರವರು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಲ್ಬರ್ಟ್ ಡಿಕೋಸ್ಟಾ ಮತ್ತು ಶ್ರೀಮತಿ ಸಿಂಧೂ ಭಾಸ್ಕರ್ ನಾಯ್ಕ್ ರವರು,ಗ್ಯಾರಂಟಿ ಅಧ್ಯಕ್ಷರು ರಾಜು ನಾಯ್ಕ್ ರವರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಗಣ್ಯರು ಉಪಸ್ಥಿತರಿದ್ದರು.