ಭಟ್ಕಳ-ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಬಡವರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಕದ್ದು ಸಾಗಿಸುತ್ತಿದ್ದವರನ್ನು ಭಟ್ಕಳದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಸಾಗಿಸುತ್ತಿದ್ದ ಲಾರಿಸಹಿತ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.
ಭಟ್ಕಳದ ನೂರ ಮಸೀದಿ ಹತ್ತಿರ ಅಕ್ಕಿ ತುಂಬಿದ ಲಾರಿ ಸಂಚಾರ ಮಾಡುತ್ತಿತ್ತು ,ಅದರಲ್ಲಿ 3.23 ಲಕ್ಷ ರೂ ಮೌಲ್ಯದ 9,500 ಕೆಜಿ ಸಾಗಾಟವಾಗುತ್ತಿತ್ತು. ಆ ಅಕ್ಕಿಯನ್ನು ಕದ್ದು ಸಾಗಿಸುತ್ತಿರುವುದು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರ ಗಮನಕ್ಕೆ ಕಚಿತ ಮಾಹಿತಿ ಮೂಲಕ ಗಮನಕ್ಕೆ ಬಂದಿತು. ಡಿವೈಎಸ್ಪಿ ಮಹೇಶ್ ಕೆ ಎಂ ಅವರ ನೆರವುಪಡೆದು ಅಧಿಕಾರಿಗಳು ದಾಳಿ ನಡೆಸಿದರು.
ಅಕ್ರಮ ಅಕ್ಕಿ ಸಾಗಾಟಗಾರ ಮೋಹಮ್ಮದ್ ಸಮೀರ್ ಭಟ್ಕಳ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಅರಿವಾಗಿದ್ದು, ವಾಹನದ ಚಾಲಕ ಪ್ರವೀಣ್ ಎನ್ ಆರ್ ಅವರನನು ಪೊಲೀಸರು ವಶಕ್ಕೆಪಡೆದರು. ಆದರೆ, ಪ್ರಮುಖ ಆರೋಪಿ ಸಿಕ್ಕಿ ಪೊಲೀಸರ ಬಲೆ ಬಿಸಿದ್ದಾರೆ. ಭಟ್ಕಳ ನಗರ ಠಾಣೆಯ ಪಿಎಸೈ ನವೀನ್ ನಾಯ್ಕ ಅವರು ಪ್ರಕರಣ ದಾಖಲಿಸಿದ್ದು, ಅಕ್ಕಿ ಜೊತೆ ಲಾರಿಯನ್ನು ಜಪ್ತು ಮಾಡಿ ತನಿಖೆ ಕೈಗೊಂಡಿದ್ದಾರೆ.