
ಭಟ್ಕಳ – ಆಸರಕೇರಿಯ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ಮುಡೇಶ್ವರದ ಖ್ಯಾತ ಉದ್ಯಮಿಯಾಗಿರುವ ಶ್ರೀ ನೇತ್ರಾಣಿ ಗಣೇಶ್ ಅವರು ನೆರವೇರಿಸಿದರು.ಈ ಸಂದರ್ಭ ಸಂಘದ ಅಧ್ಯಕ್ಷ ಅಣ್ಣಪ್ಪ ಎಸ್. ನಾಯ್ಕ್, ನಿಚ್ಚಲಮಕ್ಕಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ನಾಯ್ಕ್, ಹಾಗೂ ಸ್ಥಳೀಯ ಗಣ್ಯರಾದ ರಮೇಶ್ ನಾಯ್ಕ್, ಶ್ರೀಧರ್ ನಾಯ್ಕ್, ಕೃಷ್ಣ ನಾಯ್ಕ್, ವೆಂಕಟೇಶ್ ನಾಯ್ಕ್, ಮನ್ಮೋಹನ್ ನಾಯ್ಕ್, ನಿತೇಶ್ ಮಹಲೆ, ಗುರುರಾಜ್ ಶೇಟ್, ವಿನಾಯಕ ಮಡಿವಾಳ ಮುಂತಾದವರು ಹಾಜರಿದ್ದರು.

ಅದೇ ಸಂದರ್ಭದಲ್ಲಿ ವೆಂಕಟೇಶ್ವರ ಸಂಘದ ಅಧ್ಯಕ್ಷ ಶ್ರೀಧರ್ ನಾಯ್ಕ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಪಾಂಡುರಂಗ ನಾಯ್ಕ್ ಸುಗಮವಾಗಿ ನಿರೂಪಿಸಿದರು, ಹಾಗೂ ರಾಘವೇಂದ್ರ ನಾಯ್ಕ್ ವಂದನೆ ಸಲ್ಲಿಸಿದರು.

