ಬೆಂಗಳೂರು, 07 ನವೆಂಬರ್ 2025 — INBCWF ನ ನೇತೃತ್ವದ ಆದೇಶದಂತೆ ಶ್ರೀಮತಿ ಸುನೀತಾ .ಆರ್ ಅವರನ್ನು INBCWF ಬೆಂಗಳೂರು ಕೇಂದ್ರದ ಯುವ-ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿ
ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ — ಶ್ರೀ ಜಿ.ಆರ್. ದಿನೇಶ್,ರಾಜ್ಯ ಯುವ ಘಟಕದ ಅಧ್ಯಕ್ಷ — ಶ್ರೀ ಬಿ. ಪ್ರಸಾದ್ ಆರಾಧ್ಯ ಮತ್ತು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ — ಶ್ರೀಮತಿ ಸಂಗೀತ ನಾಡಗೌಡ ಅವರು ಸುನಿತಾ. ಆರ್ ಅವರಿಗೆ ಆದೇಶ ಪತ್ರ ನೀಡಿದರು.

ಸಂಘಟನೆಯ ಪ್ರಕಟಣೆಯ ಪ್ರಕಾರ, ಸುನೀತಾ . ಆರ್ ಯುವ ಮತ್ತು ಮಹಿಳಾ ಕಾರ್ಯಗಳನ್ನು ಸಕ್ರಿಯವಾಗಿ ಸಮನ್ವಯಗೊಳಿಸುವ ಹಾಗೂ ಕಾರ್ಯಕ್ರಮಗಳ ಸಂಘಟನೆಯಲ್ಲಿಯೇ ತವಾದ್ಭುತ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ತಂಡದ ಮೊದಲ ಸಭೆ ಮತ್ತು ಕಾರ್ಯಕ್ರಮಗಳ ವಿವರಗಳು ಅಧಿಕೃತವಾಗಿ ಪ್ರಕಟಿಸಲಾಗುವುದು.ಹೊಸ ಅಧ್ಯಕ್ಷೆಯ ನೇತೃತ್ವದಲ್ಲಿ ಯುವ ಮತ್ತು ಮಹಿಳಾ ಕಾರ್ಯಕ್ರಮಗಳ ಸಂಘಟನೆ, ತರಬೇತಿ ಹಾಗೂ ಸ್ಥಳೀಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗಲಿದೆ. ಅಧಿಕೃತ ಸಭೆ ಮತ್ತು ಕಾರ್ಯಕ್ರಮಗಳ ದಿನಾಂಕಗಳು ಮುಂದಿನ ಪ್ರಕಟಣೆಗಳಲ್ಲಿ ತಿಳಿಸಲಾಗುವುದು ಎಂದು ನೂತನ ಅಧ್ಯಕ್ಷೆ ಶ್ರೀಮತಿ ಸುನಿತಾ ತಿಳಿಸಿದರು.

