ಕಾರವಾರ: ಕಬ್ಬಿಣದ ಅಯಸ್ಕದ ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈಡಿ) ಸಂಸ್ಥೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ ಸುಮಾರು ₹21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.

ಈಡಿ ನವೆಂಬರ್ 6ರಂದು ಕಪ್ಪುಹಣ ತಡೆ ಕಾಯ್ದೆ (PMLA) ಅಡಿ ತಾತ್ಕಾಲಿಕ ಆದೇಶ ಹೊರಡಿಸಿ ಕ್ರಮ ಕೈಗೊಂಡಿದೆ.
ಮುಟ್ಟುಗೋಲು ಹಾಕಿರುವ ಆಸ್ತಿಗಳು ಸೈಲ್ ಅವರ ಗೋವಾಕೇಂದ್ರಿತ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (SMPL) ಕಂಪನಿಗೆ ಸೇರಿದ್ದವು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಾರವಾರ ಕ್ಷೇತ್ರದ ಶಾಸಕನಾದ ಸತೀಶ್ ಸೈಲ್ ಅವರನ್ನು ಈಡಿ ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ವೈದ್ಯಕೀಯ ಕಾರಣದಿಂದ ಅವರಿಗೆ ತಾತ್ಕಾಲಿಕ ಜಾಮೀನು ನೀಡಲಾಗಿತ್ತು.ಆದರೆ ಕಳೆದ ಶುಕ್ರವಾರ ವಿಶೇಷ ಕಪ್ಪುಹಣ ತಡೆ ನ್ಯಾಯಾಲಯವು ಆ ಜಾಮೀನು ಆದೇಶವನ್ನು ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

