
ಭಟ್ಕಳ: ಅರಣ್ಯಪ್ರದೇಶದಲ್ಲಿ ವಾಸಿಸುವ ಕುಟುಂಬಗಳ ಹಕ್ಕುಗಳನ್ನು ಸ್ಪಷ್ಟಪಡಿಸುವ ಮತ್ತು ಕಾನೂನು ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಭಟ್ಕಳ ತಾಲೂಕಿನಲ್ಲಿ ಗ್ರೀನ್ ಕಾರ್ಡ್ ಹೊಂದಿರುವ ಪ್ರಮುಖರ ಸಭೆ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮವನ್ನು ನವೆಂಬರ್ 22ರಂದು ಬೆಳಗ್ಗೆ 9.30ಕ್ಕೆ, ಪ್ರವಾಸಿ ಮಂದಿರದ ಸಮೀಪ ನಡೆಸಲಿದ್ದು, ಸಭೆಯ ರೂಪರೇಷೆಗಳು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಈ ಸಂದರ್ಭ ತಾಲ್ಲೂಕಿನ ಜವಾಬ್ದಾರರು ಹಾಗೂ ಗ್ರೀನ್ ಕಾರ್ಡ್ ಪ್ರತಿನಿಧಿಗಳು ಉಪಸ್ಥಿತರಿರಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಹೊನ್ನಾವರದಲ್ಲೂ ಜಾಗೃತಿ ಕಾರ್ಯಕ್ರಮ
ಅರಣ್ಯವಾಸಿಗಳ ಹಕ್ಕು ಹಾಗೂ ಕಾನೂನು ವಿಚಾರಗಳ ಬಗ್ಗೆ ತಾಲೂಕು ಮಟ್ಟದಲ್ಲಿ ಅರಿವು ಮೂಡಿಸುವ ಸಲುವಾಗಿ ಮತ್ತೊಂದು ಸಭೆಯನ್ನು ನವೆಂಬರ್ 22, ಶನಿವಾರ, ಹೊನ್ನಾವರ ತಾಲ್ಲೂಕಿನ ನಾಮದಾರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಸಮಾಜದ ಆಸಕ್ತರು, ಸ್ಥಳೀಯ ಮುಖಂಡರು ಹಾಗೂ ಹಕ್ಕುಪತ್ರದ ಆಸಕ್ತರು ಸಭೆಯಲ್ಲಿ ಭಾಗವಹಿಸಿ ತನ್ನ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

