ಭಟ್ಕಳ ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಸ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ವಿಶ್ವ ಹಿಂದೂ ಪರಿಷತ್ತು ಭಟ್ಕಳ ಮತ್ತು ಹಿಂದೂ ಜಾಗರಣ ವೇಧಿಕೆ ಭಟ್ಕಳ ಘಟಕ ಮನವಿ
ಭಟ್ಕಳ: ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕ ಹಾಗೂ ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕ ವತಿಯಿಂದ ಗುರುವಾರ ಭಟ್ಕಳದ ತಾಲೂಕ ಪಂಚಾಯತ ಎದುರುಗಡೆ ಯ ಹಣ್ಣಿನ ಅಂಗಡಿ ಕಿಡಿಗೇಡಿಗಳು ಬೆಂಕ್ಕಿ ಹಚ್ಚಿ ಸುಟ್ಟು ಹಾಕಿದ ದುಸ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಮತ್ತು ಭಟ್ಕಳದ ಮುರಿನಕಟ್ಟೆಯಲ್ಲಿ ಮಾರಿ ದೇವಿಯ ಗೊಂಬೆ ನಾಪತ್ತೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾನ್ಯ ಎಸಿ ಅವರ ಅನುಪಸ್ಥತಿಯಲ್ಲಿ ತಹಶಿಲ್ದಾರರಿಗೆ ಮತ್ತು ಭಟ್ಕಳ ನಗರ ಪೊಲೀಸ್ *ಇಲಾಖೆಯ ಅಧಿಕಾರಿಗಳಿಗೆ ಭಟ್ಕಳದಲ್ಲಿ ಈ ರೀತಿ ಘಟನೆಗೆ ಕಾರಣ ವಾಗಿ ಪದೆ ಪದೆ ಶಾಂತಿಭಂಗ ಉಂಟು ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿ ನೀಡಿದರು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳ ತಾಲೂಕ ಅಧ್ಯಕ್ಷ ರಾಮಕೃಷ್ಣ ನಾಯ್ಕ್, ಹಿಂದೂ ಜಾಗರಣ ವೇಧಿಕೆ ಯ ನಾಗೇಶ ನಾಯ್ಕ್, ಭಜರಂಗದಳದ ಪ್ರಮುಖ ದೀಪಕ್ ನಾಯ್ಕ್, ಬಿಜಿಪಿ ಮುಖಂಡರಾದ ಶ್ರೀಕಾಂತ ನಾಯ್ಕ್ ಆಸರಕೇರಿ, ರಾಘು ನಾಯ್ಕ್, ಸುಬ್ರಾಯ ದೇವಾಡಿಗ,ಕೇಶವ್ ನಾಯ್ಕ್ ಚೌತನಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ನಸುಕಿನಲ್ಲಿ ತಗುಲಿದ ಬೆಂಕಿಗೆ ಇಡೀ ಅಂಗಡಿ ಭಸ್ಮವಾಗಿದೆ. ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು ಗ್ರಾಮದ ಕೋಟೆಮನೆಯ ರಾಮಚಂದ್ರ ನಾಯ್ಕ ಅವರು ಇಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಿಸಿಕೊಂಡಿದ್ದರು. ಅಲ್ಲಿ ಅವರು ಹಣ್ಣಿನ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಡಿ 26ರ ನಸುಕಿನ 2.30ಕ್ಕೆ ಅಂಗಡಿ ಹೊತ್ತಿ ಉರಿದಿದೆ. ದ್ವೇಷಕ್ಕೆ ಉರಿದ ಅಂಗಡಿ ಹಣ್ಣಿನ ಅಂಗಡಿಯ ಮಾಲಕನ ಮೇಲಿನ ದ್ವೇಷದಿಂದ ಮಳಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅನುಮಾನ ವ್ಯಕ್ತವಾಗಿದೆ. 7 ಲಕ್ಷ ರೂ ಹಾನಿಯಾದ ಬಗ್ಗೆ ರಾಮಚಂದ್ರ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಹುಡುಕಾಟ ನಡೆಸಿದ್ದಾರೆ.