ಭಟ್ಕಳ: ಭಟ್ಕಳ ಭೂ ಮಾಪನಾ ಇಲಾಖೆಯಲ್ಲಿ ಸರ್ವೆಯರ್ ಆಗಿದ್ದ ಅನೂಪ ಶೆಟ್ಟಿ ಅವರ ಕೈಗೆ ಗಾಜು ಚುಚ್ಚಿದ್ದರಿಂದ ಅವರು ಸಾವನಪ್ಪಿದ್ದಾರೆ. ಬಲ ಕೈ ರಕ್ತ ನಾಳಕ್ಕೆ ಗಾಜು ಚುಚ್ಚಿದ್ದು, ರಕ್ತಸ್ರಾವದಿಂದ ಅವರು ಕೊನೆ ಉಸಿರೆಳೆದಿದ್ದಾರೆ.
ಅನುಪ ಶೆಟ್ಟಿ (35) ಅವರು ಕುಮಟಾದ ಗಾಂಧೀನಗರದವರು. ಭಟ್ಕಳದ ಭೂ ಮಾಪನಾ ಇಲಾಖೆಯಲ್ಲಿ ಅವರು ಕಳೆದ ಏಳು ವರ್ಷಗಳಿಂದ ಸರ್ವೇಯರ್ ಆಗಿದ್ದರು. ಹೀಗಾಗಿ ಮುರುಡೇಶ್ವರ ಬಳಿಯ ಸಣ್ಣಬಾವಿ ಕ್ರಾಸಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಪತ್ನಿ ಮಕ್ಕಳ ಜೊತೆ ಅವರು ಅಲ್ಲಿ ವಾಸವಾಗಿದ್ದರು.
ಬಾಡಿಗೆ ಮನೆಯ ಮುಂದಿನ ಕೆನಾಪಿಯಲ್ಲಿ ಅವರು ಗುರುವಾರ ಸಂಜೆ ಆಯತಪ್ಪಿ ಬಿದ್ದರು. ಕಿಟಕಿ ಗಾಜಿಗೆ ಅವರ ಕೈ ತಗುಲಿದ ಪರಿಣಾಮ ಕೈ ಊದಿಕೊಂಡಿತ್ತು. ಹೀಗಾಗಿ ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ.
.ರಕ್ತನಾಳಕ್ಕೆ ಗಾಯವಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಶುಕ್ರವಾರ ನಸುಕಿನಲ್ಲಿ ಅವರು ಕೊನೆ ಉಸಿರೆಳೆದರು.