
ಪಡುಬಿದ್ರಿ : ಪಡುಬಿದ್ರಿ ಸಮೀಪ ಅಮವಾಸ್ಯೆಯಂದು ಸಮುದ್ರಕ್ಕೆ ಸ್ಥಾನಕ್ಕೆ ತೆರಳಿದ ಇಬ್ಬರು ಸಮುದ್ರಪಾಲಾದ ಘಟನೆ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದಿದೆ.ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ 6 ಜನರ ಪೈಕಿ ಇಬ್ಬರು ನೀರಿನ ಸೆಳೆತಕ್ಕೆ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಹೆಜಮಾಡಿಯ ಅಕ್ಷಯ್ (20) ಮತ್ತು ಚಿರಾಗ್ ಅಮೀನ್(17) ಎಂದು ತಿಳಿದು ಬಂದಿದೆ.ಇವರು ಕಾರ್ಕಳದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.ರಕ್ಷಿಸಲ್ಪಟ್ಟ ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

