
ಚಿಕ್ಕಮಗಳೂರು:ಚಿಕ್ಕಮಗಳೂರು ಬರಹಗಾರರ ಸಂಘದ ವತಿಯಿಂದ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕ ಭರವಸೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷೆ ಡಾ. ವಿದ್ಯಾ ಕೆ. ನೇತೃತ್ವ ವಹಿಸಿದ್ದರು. ಯುರೇಕ್ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಹಾಗೂ ವೇದಿಕೆಯಲ್ಲಿದ್ದ ಗಣ್ಯರನ್ನುೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ರಾಕೇಶ್ ಸಿಂಗ್ ಭಕ್ತಿಗೀತೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಎಚ್. ಎನ್. ಶಾಂತಕುಮಾರ್ ಪ್ರಾಸ್ತಾವಿಕ ಮಾತುಗಳ ಮೂಲಕ ಕಾರ್ಯಕ್ರಮದ ವೈಭವವನ್ನು ವಿವರಿಸಿದರು. ಮೂಡಿಗೆರೆಯ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಡಾ. ಜಗದೀಶ ನಾಯಕ್ ರಾಜ್ಯೋತ್ಸವದ ಮಹತ್ವ ಮತ್ತು ಕನ್ನಡ ಸಾಹಿತ್ಯ ಪರಂಪರೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು.

ನಂತರ ಅಧ್ಯಕ್ಷೀಯ ನುಡಿಗಳನ್ನು ಡಾ. ವಿದ್ಯಾ ಕೆ. ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಗಣ್ಯರಾಗಿ ರವಿ ಕುನ್ನಳ್ಳಿ, ಡಿ.ಕೆ. ಲಕ್ಷ್ಮಣ್ ಗೌಡ, ಈ. ಸುಬ್ರಹ್ಮಣ್ಯ, ಕೆಕೆ ಪ್ರದೀಪ್ ಕುಮಾರ್, ಸಮಾಜಸೇವಕ ಹಸೈನಾರ್, ಹಿರಿಯ ಕಲಾವಿದ ರವೀಂದ್ರ ಬಕ್ಕಿ, ಮತ್ತು ಚಿಕ್ಕಮಗಳೂರು ತಾಲೂಕು ಬರಹಗಾರರ ಸಂಘದ ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು.

ಸಾಧಕರಿಗೆ ಗೌರವ:
ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಪ್ರಕಾಶ್ ಆರ್. ಅವರಿಗೆ ವಿಶೇಷ ಸನ್ಮಾನ ನಡೆಯಿತು.
ಜನಪದ ಸಂಗೀತ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಸುಬ್ರಹ್ಮಣ್ಯ ಮತ್ತು ವೆಂಕಟೇಶ್ ಅವರಿಗೆ ಉತ್ತಮ ಗಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೇಮ ಪುಣ್ಯಮೂರ್ತಿ ಅವರಿಗೆ ಲೇಖಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಶ್ರಾವ್ಯ ಎಸ್. ಕುಮಾರ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಕುಮಾರ್, ಕಾಂಚನ, ರಾಕೇಶ್ ಸಿಂಗ್, ವೆಂಕಟೇಶ್, ಅಕ್ಷರ, ಕೃಷ್ಣ, ಅಶ್ವಿನಿ ಸೇರಿದಂತೆ ಹಲವರು ತಮ್ಮ ಮನಮೋಹಕ ಪ್ರದರ್ಶನಗಳಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.
ಕಾರ್ಯಕ್ರಮದ ನಿರೂಪಣೆಯನ್ನು ಇಂಪಾ ಸವೀನ್ ಸುಗಮವಾಗಿ ನಿರ್ವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು. ವೇದಿಕೆ ನಿರ್ವಹಣೆಯನ್ನು ನಿಶ್ಚಿತ್ ವಹಿಸಿದ್ದರು. ಜೊತೆಯಲ್ಲಿ, ರವಿ ಬಕ್ಕಿ ಅವರನ್ನು ಉತ್ತಮ ಗಾಯಕ ಪ್ರಶಸ್ತಿಯಿಂದ ಗೌರವಿಸಲಾಯಿತು.
