
ಭಟ್ಕಳ:ದಲಿತ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಮೀಸಲಾತಿ ರಕ್ಷಣಾ ಒಕ್ಕೂಟದ ಅಧ್ಯಕ್ಷರಾಗಿರುವ ಶ್ರೀ ಕಿರಣ ನಾರಾಯಣ ಶಿರೂರ ಅವರಿಗೆ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ವಿಶಿಷ್ಟ ಸೇವಾ ಪ್ರಶಸ್ತಿ – 2025 ಪ್ರದಾನ ಮಾಡಲಾಗಿದೆ.

ದೆಹಲಿಯ ಪಂಚಶೀಲ ಆಶ್ರಮದಲ್ಲಿ ಡಿಸೆಂಬರ್ 12, 2025 (ಶುಕ್ರವಾರ) ನಡೆದ 41ನೇ ರಾಷ್ಟ್ರೀಯ ಸಮ್ಮೇಳನದ ವೇದಿಕೆಯಲ್ಲಿ ಈ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಡಾ. ಸತ್ಯನಾರಾಯಣ ಜಟಿಯಾ ಹಾಗೂ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಸುಮನಾಕ್ಷರ ಅವರ ಉಪಸ್ಥಿತಿಯಲ್ಲಿ ಕಿರಣ ಶಿರೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಮೀಸಲಾತಿ ವಿಚಾರದಲ್ಲಿ ಜಾಗೃತಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಡೆಸಿರುವ ಸೇವೆಯನ್ನು ಗುರುತಿಸಿ ಈ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಆಯೋಜಕರು ತಿಳಿಸಿದರು.

ಈ ಗೌರವವು ರಾಜ್ಯದಲ್ಲಿನ ದಲಿತ ಹೋರಾಟಗಾರರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
