
ಭಟ್ಕಳ-ಭಟ್ಕಳ ತಾಲೂಕಿನ ಮುರುಡೇಶ್ವರದ ಉತ್ತರಕೊಪ್ಪ ರಸ್ತೆ ಸಮೀಪ ಇರುವ ಕೀರ್ತಿ ಲಾಡ್ಜಿನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಡಿಸೆಂಬರ್ 18ರಂದು ನಡೆದಿದೆ.
ಮುರುಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಲಾಡ್ಜಿನ ರೂಂ ನಂಬರ್ 206ಕ್ಕೆ ಪೊಲೀಸರು ಪ್ರವೇಶಿಸಿದ್ದು, ಆ ವೇಳೆ ಅಲ್ಲಿ 11 ಮಂದಿ ಇಸ್ಪೀಟ್ ಆಟದಲ್ಲಿ ತೊಡಗಿರುವುದು ಪತ್ತೆಯಾಗಿದೆ.

ಪೊಲೀಸರ ಪ್ರಕಾರ, ಬಂಧಿತರಲ್ಲಿ ಮುರುಡೇಶ್ವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಾದ ಟೇಲರಿಂಗ್, ಹಮಾಲಿ, ಶಿಲ್ಪಿ, ಹೋಟೆಲ್ ಕಾರ್ಮಿಕ, ಫೋಟೋಗ್ರಾಫರ್, ಕೂಲಿ ಕಾರ್ಮಿಕ ಹಾಗೂ ಚಾಲಕರಾಗಿ ಕೆಲಸ ನಿರ್ವಹಿಸುವವರು ಸೇರಿದ್ದಾರೆ. ದಾಳಿಯ ವೇಳೆ ಇಸ್ಪೀಟ್ ಆಟಕ್ಕೆ ಬಳಸಲಾಗುತ್ತಿದ್ದ ₹7,750 ನಗದು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತರ ಬಳಿ ಇದ್ದ 11 ಮೊಬೈಲ್ ಫೋನ್‌ಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬೀರಾದರ್ ಹಾಗೂ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಭರತಕುಮಾರ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಘಟನೆಯ ಸಂಬಂಧ ಅಕ್ರಮ ಜೂಜಾಟಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಬಂಧಿತರ ಜೊತೆಗೆ ಕೀರ್ತಿ ಲಾಡ್ಜಿನ ವ್ಯವಸ್ಥಾಪಕನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
