
ಮಂಕಿ/ಹೊನ್ನಾವರ:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ ಹುಟ್ಟೂರಾದ ಮಂಕಿ ಪಟ್ಟಣ ಪಂಚಾಯತ್‌ಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶಗಳು ಇಂದು ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷವು ಬಹುಮತದೊಂದಿಗೆ ಅಧಿಕಾರದ ಹಾದಿ ಹಿಡಿದಿದೆ. ಒಟ್ಟು 20 ವಾರ್ಡ್‌ಗಳ ಪೈಕಿ 12 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ, ಕಾಂಗ್ರೆಸ್ ಪಕ್ಷ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಪಟ್ಟಣ ಪಂಚಾಯತ್ ಘೋಷಣೆಯಾದ ಬಳಿಕ ಸುದೀರ್ಘ ವಿರಾಮದ ನಂತರ ನಡೆದ ಈ ಚುನಾವಣೆ ಮಂಕಿ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗೆ ಹೊಸ ಚೈತನ್ಯ ತಂದಿದೆ. ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ ಹುಟ್ಟೂರಾದ ಮಂಕಿ ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವುದರೊಂದಿಗೆ ಮಾಜಿ ಸಚಿವ ಶಿವಾನಂದ ನಾಯ್ಕ್ ಮೇಲುಗೈ ಸಾದಿಸಿದಂತಾಗಿದೆ.
ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹೊನ್ನಾವರದ ಶರಾವತಿ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ರಾಜಕೀಯ ವಲಯದಲ್ಲಿ ಈ ಫಲಿತಾಂಶವನ್ನು ಮಾಜಿ ಶಾಸಕ ಸುನೀಲ್ ನಾಯ್ಕ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕ ಅವರ ಬಣದ ಪ್ರಭಾವ ಸ್ಪಷ್ಟವಾಗಿ ಕಾಣಿಸಿಕೊಂಡಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಆಡಳಿತ ರಚನೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

📊 ವಾರ್ಡ್‌ವಾರು ಆಯ್ಕೆಯಾದ ಸದಸ್ಯರು
🔹 1ನೇ ವಾರ್ಡ್ (ಮಡಿ): ಜ್ಯೋತಿ ಸತೀಶ ಖಾರ್ವಿ – ಬಿಜೆಪಿ
🔹 2ನೇ ವಾರ್ಡ್ (ದೇವರಗದ್ದೆ): ಮೀನಾಕ್ಷಿ ಕೃಷ್ಣ ಹಸ್ಲರ – ಬಿಜೆಪಿ (297 ಮತ)
🔹 3ನೇ ವಾರ್ಡ್ (ಹಳೇಮಠ): ಆನಂದ ಗಣಪತಿ ನಾಯ್ಕ – ಬಿಜೆಪಿ (276)
🔹 4ನೇ ವಾರ್ಡ್ (ನವಾಯತಕೇರಿ): ರೇಷ್ಮಾ ಫರ್ನಾಂಡೀಸ್ – ಕಾಂಗ್ರೆಸ್
🔹 5ನೇ ವಾರ್ಡ್ (ಕಟ್ಟೆ ಅಂಗಡಿ): ಮಹಮ್ಮದ್ ಸಿದ್ದಿಕ್ ಹಸನ್ ಬಾಪು – ಕಾಂಗ್ರೆಸ್
🔹 6ನೇ ವಾರ್ಡ್ (ನಾಖುದಾ ಮೊಹಲ್ಲಾ): ರಹಮತುಲ್ಲಾ ಬೊಟ್ಲೇರ – ಕಾಂಗ್ರೆಸ್ (435)
🔹 7ನೇ ವಾರ್ಡ್ (ಬಣಸಾಲೆ): ಸವಿತಾ ಮಲ್ಲಯ್ಯ ನಾಯ್ಕ – ಬಿಜೆಪಿ (220)
🔹 8ನೇ ವಾರ್ಡ್ (ದಾಸನಮಕ್ಕಿ): ಪೀಟರ್ ಎಸ್. ರೊಡ್ರಗೀಸ್ – ಬಿಜೆಪಿ (287)
🔹 9ನೇ ವಾರ್ಡ್ (ಹೊಸಹಿತ್ಲ): ಗೀತಾ ರಮಾಕಾಂತ ಹರಿಕಂತ್ರ – ಬಿಜೆಪಿ (472)
🔹 10ನೇ ವಾರ್ಡ್ (ದೊಡ್ಡಗುಂದ): ಗಜಾನನ ಬಾಲಯ್ಯ ನಾಯ್ಕ – ಕಾಂಗ್ರೆಸ್ (376)
🔹 11ನೇ ವಾರ್ಡ್ (ಗುಳದಕೇರಿ–1): ಸತೀಶ ದೇವಪ್ಪ ನಾಯ್ಕ – ಬಿಜೆಪಿ (282)
🔹 12ನೇ ವಾರ್ಡ್ (ಗುಳದಕೇರಿ–2): ಸಂಜೀವ ಗಂಗಾಧರ ನಾಯ್ಕ – ಕಾಂಗ್ರೆಸ್ (272)
🔹 13ನೇ ವಾರ್ಡ್ (ಚಿತ್ತಾರ): ರೇಖಾ ಗಿರೀಶ ನಾಯ್ಕ – ಬಿಜೆಪಿ (548)
🔹 14ನೇ ವಾರ್ಡ್ (ಗಂಜಿಗೇರಿ): ನೇತ್ರಾವತಿ ಈಶ್ವರ ಗೌಡ – ಬಿಜೆಪಿ (223)
🔹 15ನೇ ವಾರ್ಡ್ (ಸಾರಸ್ವತಕೇರಿ): ರವಿ ಉಮೇಶ ನಾಯ್ಕ – ಬಿಜೆಪಿ (592)
🔹 16ನೇ ವಾರ್ಡ್: ಉಲ್ಲಾಸ ಅಂಗದ ನಾಯ್ಕ – ಕಾಂಗ್ರೆಸ್ (155)
🔹 17ನೇ ವಾರ್ಡ್ (ತಾಳಮಕ್ಕಿ): ಉಷಾ ಕೃಷ್ಣ ನಾಯ್ಕ – ಕಾಂಗ್ರೆಸ್ (397)
🔹 18ನೇ ವಾರ್ಡ್ (ಕೊಪ್ಪದಮಕ್ಕಿ): ವಿಜಯಾ ಮೋಹನ ನಾಯ್ಕ – ಬಿಜೆಪಿ (388)
🔹 19ನೇ ವಾರ್ಡ್: ವಿನಾಯಕ ಮೊಗೇರ – ಕಾಂಗ್ರೆಸ್ (299)
🔹 20ನೇ ವಾರ್ಡ್: ಸವಿತಾ ಹನುಮಂತ ನಾಯ್ಕ – ಬಿಜೆಪಿ (344).

