ಜನರಿಗೆ ಸರಣಿ ವಂಚನೆ ಮಾಡುತ್ತಿದ್ದ ಖತರ್ನಾಕ್ ದಂಪತಿಗಳು ಅರೆಸ್ಟ್- ಬಂಧಿತರಿಂದ 34 ಲಕ್ಷ ರೂಪಾಯಿ ವಶ.
ಮಂಗಳೂರು-ಜನರಿಗೆ ಸರಣಿ ವಂಚನೆ ಮಾಡಿದ್ದ ಖತರ್ನಾಕ್ ದಂಪತಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಡಿಮೆ ಬೆಲೆಗೆ ಸೀಜ್ ಆಭರಣಗಳನ್ನು ಕೊಡೋದಾಗಿ ಕೋಟಿ-ಕೋಟಿ ವಂಚನೆ ಮಾಡಿದ್ದ ಆರೋಪ ಈ ದಂಪತಿ ಮೇಲಿದೆ.
ಆರೋಪಿ ದಂಪತಿ
ದಾರ್ಬಿನ್ ದಾಸ್ @ ಮೋಹನ್ ದಾಸ್,ಧನುಷ್ಯ @ ರಾಚೆಲ್ ಬಂಧಿತ ಆರೋಪಿಗಳಾಗಿದ್ಧಾರೆ.
ಉಡುಪಿ ಮೂಲದ ಧನುಷ್ಯ ನನ್ನ ಪತಿ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿ ಅಂತಾ ಹೇಳಿಕೊಳ್ತಿದ್ದಳು. ಸೀಜ್ ಮಾಡಿದ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಕೊಡ್ತೀವಿ. ಏರ್ಪೋರ್ಟ್ನಲ್ಲೇ ಕೆಲಸ ಕೊಡಿಸುತ್ತೇವೆ ಅಂತಾ ಹಲವರನ್ನು ನಂಬಿಸುತ್ತಿದ್ದಳು. ಆನಂತರ ಪತಿ ಜತೆ ಸೇರಿ ಹಣ ವಸೂಲಿ ಮಾಡಿಕೊಳ್ತಿದ್ದಳು.
ಸ್ನೇಹಾ ಎಂಬವರು ಈ ದಂಪತಿಗೆ 68 ಲಕ್ಷ ರೂಪಾಯಿ ನೀಡಿ ವಂಚನೆ ಗೊಳಗಾಗಿದ್ದರು. ಕೊಡಿಗೆಹಳ್ಳಿ ಹಾಗೂ ದೇವನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿತ್ತು. ಹೀಗೆ ವಂಚಿಸಿದ ಹಣದಿಂದ ಮಂಗಳೂರು, ಉಡುಪಿ ಸೇರಿ ಹಲವೆಡೆ ಫ್ಲ್ಯಾಟ್, ಜಮೀನು ಖರೀದಿ ಮಾಡಿರುವ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ. 34 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.