ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು
ಬಳ್ಳಾರಿ-ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಬಳಿ ನಡೆದಿದೆ.
ಎಮ್ಮಿಗನೂರಿನ ಕನಕರಾಜು(19),ಮುರುಡಿ ಗ್ರಾಮದ ಶಂಕರ(18),ನಾಗೇನಹಳ್ಳಿಯ ಹೊನ್ನೂರ(22) ಮೃತ ವಿದ್ಯಾರ್ಥಿಗಳು.
ಬಾಲಕರು ನಿನ್ನೆ ಮಧ್ಯರಾತ್ರಿ ಸುಮಾರಿಗೆ ರಸ್ತೆ ಕ್ರಾಸ್ ಮಾಡುವ ವೇಳೆ ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.ಈ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ