ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ ಅಬ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಲಿದ್ದಾರ ಜೆಡಿಎಸ್ ಅಬ್ಯರ್ಥಿ ನಾಗೇಂದ್ರ ನಾಯ್ಕ?
ಭಟ್ಕಳ- ಕಳೆದ 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಭಟ್ಕಳದಲಿನ ವಾತವರಣ ಬಹಳ ಭಿನ್ನವಾಗಿ ಕಾಣುತ್ತಿದೆ. ಕಳೆದ ಬಾರಿ ಕಾಂಗ್ರೇಸ್ ಮತ್ತು ಬೆಜೆಪಿ ನಡುವೆ ನೇರಾ ಹಣಹಣಿ ನಡೆದು ಕೇವಲ 5500 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ಜಯಗಳಿಸಿದರು. ಆದರೆ ಈ ಬಾರಿ ಬಿಜೆಪಿಯೊಂದಿಗೆ ಜೆ.ಡಿ.ಎಸ್ ಕೂಡ ಪ್ರಭಲ ಪೈಪೋಟಿ ನೀಡಲು ಸಜ್ಜಾಗಿದೆ. ಹಾಗಾಗಿ ಭಟ್ಕಳದಲ್ಲಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ.
ಸೋಲಿನ ಗಾಯಗಳಿಂದ ಚೇತರಿಸಿಕೊಂಡ ಕಾಂಗ್ರೆಸ್ ಅಬ್ಯರ್ಥಿ ಮಂಕಾಳ ವೈದ್ಯ ಈಗ ತಮ್ಮ ಪ್ರತಿಯೊಂದು ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪನ್ನು ಯಾವುದೇ ಕಾರಣಕ್ಕೂ ಮರುಕಳಿಸದಂತೆ ಎಚ್ಚರವಹಿಸುತ್ತಿದ್ದು ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ನೀಡುವುದಕ್ಕೆ ಮುಂಚೆ ಅತ್ಯಂತ ಜಾಗೃತೆ ವಹಿಸುತ್ತಿದ್ದಾರೆ.
ಕಳೆದ ಭಾರಿ ಹೊನ್ನಾವರದ ಪರೇಶ್ ಮೇಸ್ತನ ಅಕಸ್ಮಿಕ ಸಾವನ್ನು ಕೊಲೆ ಎಂದು ಬಿಂಬಿಸಿ ಅದರ ಲಾಭ ಪಡೆದ ಬಿಜೆಪಿಯ ಸುನಿಲ್ ನಾಯ್ಕ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನ್ನು ಬಿಟ್ಟರೆ, ಈ ಬಾರಿ ಚುನಾವಣೆಯಲ್ಲಿ ಅಂತಹದ್ದೇನೋ ಸಂಭವಿಸದೆ ಇರುವುದು ಮತ್ತು ಆಡಳಿತ ವಿರೋಧಿ ಅಲೆ, ಸ್ವಪಕ್ಷ, ಸ್ವಸಮುದಾಯದವರ ವಿರೋಧ, ಭ್ರಷ್ಟಚಾರ ಆರೋಪ ಇವೆಲ್ಲವೂ ಕೂಡ ಈ ಬಾರಿ ಅವರದೇ ನಾಮಧಾರಿ ಸಮುದಾಯದ ಜೆಡಿಎಸ್ ಅಬ್ಯರ್ಥಿ ನಾಗೇಂದ್ರ ನಾಯ್ಕ ಅವರಿಗೆ ಪ್ಲಸ್ ಆಗುವ ಸಾಧ್ಯತೆ ಇದ್ದು, ಇದರ ಜೊತೆಗೆ ಮುಸ್ಲಿಂ ಸಮುದಾಯದ ಮತಗಳು ಲಭಿಸಿದರೆ ನಾಗೇಂದ್ರ ನಾಯ್ಕ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚು ಇದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿರುವ ನಾಮಧಾರಿ ಸಮಾಜದ ಮತಗಳ ಮೇಲೆ ಈ ಬಾರಿ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಎರಡೂ ಪಕ್ಷಗಳು ಕಣ್ಣಿಟ್ಟುದ್ದು ಹಿಂದುತ್ವ ಸಂಘಟನೆಗಳ ವಿರೋಧ ಕಟ್ಟಿಕೊಟ್ಟಿಕೊಂಡಿರುವ ಸುನಿಲ್ ನಾಯ್ಕಗೆ ಭಾರಿ ಹೊಡೆತ ನೀಡಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಕಾಂಗ್ರೇಸ್ ಒಂದೇ ಎದುರಾಳಿ ಅಲ್ಲ. ಈಗ ಆ ಸಾಲಿನಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ನಾಮಧಾರಿ ಸಮುದಾಯದ ಹೈಕೋರ್ಟಿನ ಖ್ಯಾತ ನ್ಯಾಯಾವಾದಿ ನಾಗೇಂದ್ರ ನಾಯ್ಕರ ಪ್ರವೇಶದಿಂದಾಗಿ ಬಿಜೆಪಿ ಪಾಲಿಗೆ ಮುಳುವಾಗಿ ಪರಿಣಮಿಸಿದಂತಾಗಿದೆ.
ಭ್ರಷ್ಟಚಾರದಲ್ಲಿ ಹೆಸರು ಕೆಡಿಸಿಕೊಂಡಿರುವ ಬಿಜೆಪಿಯ ಸುನಿಲ್ ನಾಯ್ಕ, ಸ್ವ ಸಮುದಾಯ ಹಾಗೂ ಹಿಂದೂತ್ವ ಸಂಘಟನೆಗಳ ವಿರೋಧವನ್ನು ಕಟ್ಟಿಕೊಂಡಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.ಇದಕ್ಕೆ ಪುಷ್ಟಿ ಎಂಬಂತೆ ಸುನಿಲ್ ನಾಯ್ಕರಿಗೆ ಬಿಜೆಪಿ ಯಿಂದ ಟಿಕೆಟ್ ತಪ್ಪಿಸಲು ಹಿಂದೂತ್ವ ಸಂಘಟನೆಗಳ ಪ್ರಮುಖರು ಬಹಳ ಪ್ರಯತ್ನ ಪಟ್ಟಿದ್ದರು. ಆದರೂ ಕೂಡ ಅವರಿಗೆ ಟಿಕೇಟ್ ನೀಡಿದ್ದು ಹಲವು ಮೂಲ ಬಿಜೆಪಿಗರಲ್ಲಿ ಅಸಮಧಾನದ ಹೊಗೆಯಾಡುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಸುನಿಲ್ ನಾಯ್ಕರ ಗೆಲುವು ಈ ಬಾರಿ ಕಬ್ಬಿಣದ ಕಡಲೆ ಜಗಿದಷ್ಟೆ ಕಠಿಣವಾಗಿರಲಿದೆ ಎಂದು ರಾಜಕೀಯ ಪರಿಣಿತರ ಅಭಿಪ್ರಯಾವಾಗಿದೆ.
ಈ ಬಾರಿ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟಿರುವ ನಾಮಧಾರಿ ಸಮಾಜದ ಹೈಕೋರ್ಟಿನ ನ್ಯಾಯವಾದಿ ಮತ್ತು ಸುಮಾರು ೪ ಬಾರಿ ಹೈಕೋರ್ಟಿನ ಮುಖ್ಯನ್ಯಾಯಾಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಲ್ಪಟ್ಟಿರುವ ನಾಗೇಂದ್ರ ನಾಯ್ಕ ನಾಮಧಾರಿ ಸಮಾಜದ ಶೇ.೫೦ಕ್ಕೂ ಹೆಚ್ಚು ಮತಗಳನ್ನು ಸೆಳೆಯಬಲ್ಲರು ಎಂದೇ ಹೇಳಲಾಗುತ್ತಿದೆ. ಏಕೆಂದರೆ ಹಿಂದುಳಿದ ಸಮುದಾಯದ ಒಬ್ಬ ವ್ಯಕ್ತಿ ಹೈಕೋರ್ಟಿನ ನ್ಯಾಯಮೂರ್ತಿಯಾಗಲು ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿದ್ದು ಇದೇ ಸಿಟ್ಟಿನಿಂದಾಗಿ ಈ ಬಾರಿ ಇಲ್ಲಿನ ನಾಮಧಾರಿ ಸಮುದಾಯ ತನ್ನ ಸಾಂಪ್ರಾದಾಯಿಕ ಪಕ್ಷವಾಗಿರುವ ಬಿಜೆಪಿ ಹಾಗೂ ಹಿಂದುತ್ವದ ಸಿದ್ಧಾಂತ ಬದಿಗಿಟ್ಟು ತನ್ನ ಸಮುದಾಯದ ವ್ಯಕ್ತಿಯಾಗಿರುವ ನಾಗೇಂದ್ರ ನಾಯ್ಕರನ್ನೇ ಬೆಂಬಲಿಸಿ ಅವರನ್ನೂ ಗೆಲ್ಲಿಸುವ ಪಣತೊಟ್ಟಿರುವ ವಿಷಯವೂ ಈಗ ಗುಟ್ಟಾಗೇನು ಉಳಿದಿಲ್ಲ. ಆದರೆ ನಾಗೇಂದ್ರ ನಾಯ್ಕ ಸ್ಪರ್ಧಿಸಿರುವ ಪಕ್ಷ ಜೆ.ಡಿ.ಎಸ್ ಇಲ್ಲಿ ಸಂಘಟನೆಯನ್ನು ಹೊಂದಿಲ್ಲ. ನಾಮಧಾರಿಯೊಂದಿಗೆ ಇಲ್ಲಿನ ಮುಸ್ಲಿಮರ ಮತಗಳು ಸೇರಿದರೆ ಇವರ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬುದು ನೂರಕ್ಕೆ ನೂರು ಸತ್ಯ ಎಂದು ಹೆಸರು ತಿಳಿಸಲು ಇಚ್ಚಿಸದ ನಾಮಧಾರಿ ಸಮಾಜದ ಮುಖಂಡರು ಅಭಿಪ್ರಯಾಪಟ್ಟಿದ್ದಾರೆ. ಆದರೆ ಮುಸ್ಲಿಮ್ ಮತಗಳನ್ನು ನಿರ್ಣಯಿಸುವ ತಂಝೀಂ ಸಂಸ್ಥೆ ಈ ಬಾರಿ ತನ್ನ ಸಂಪ್ರಾದಾಯಿಕ ಪಕ್ಷವಾಗಿರುವ ಕಾಂಗ್ರೇಸ್ ನ್ನು ಬಿಟ್ಟು ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನಾಮಧಾರಿ ಸಮಾಜದ ಮತಗಳಿದ್ದು ಎರಡನೆ ಸ್ಥಾನದಲ್ಲಿ ಮುಸ್ಲಿಮರ ಮತಗಳಿವೆ. ಎರಡೂ ಸಮುದಾಯದವರು ಚುನಾವಣೆಗಳಲ್ಲಿ ವಿರುದ್ಧ ದಿಕ್ಕಿನಲ್ಲೆ ಮತಚಲಾಯಿಸುತ್ತಾರೆ.ಒಂದು ವೇಳೆ ಈ ಬಾರಿ ನಾಮಧಾರಿ ಹಾಗೂ ಮುಸ್ಲಿಮ್ ಸಮುದಾಯದ ಮತದಾರರು ಒಳಗೊಳಗೆ ಜೆ.ಡಿ.ಎಸ್. ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದರೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಹೀನಾಯವಾಗಿ ಸೋಲನ್ನು ಅನುಭವಿಸಬೇಕಾಗಿ ಬರುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಆದರೆ ಮುಸ್ಲಿಂ ಸಮುದಾಯದ ಮತಗಳು ಯಾರಿಗೆ ಕೊಡಬೇಕು ಅಂತ ತಂಜಿಮ್ ನಿರ್ಣಯ ಮಾಡುವುದರಿಂದ ಅದು ಯಾರಿಗೆ ಸಿಗಲಿದೆ ಕಾದು ನೋಡಬೇಕು.
ಈ ಕುರಿತಂತೆ ಜೆಡಿಎಸ್ ಅಬ್ಯರ್ಥಿ ನಾಗೇಂದ್ರ ನಾಯ್ಕ್ಲ್ ಅವರು ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿ ನನಗೆ ಅಪಾರ ಜನಬೆಂಬಲ ದೊರೆಯುತ್ತಿದೆ.ಈ ಭಾರಿ ನನ್ನ ನಾಮಧಾರಿ ಸಮುದಾಯ್ದದ ವಿದ್ಯಾವಂತ ಬಳಗ ನನ್ನ ಬೆಂಬಲಕ್ಕೆ ನಿಂತಿದೆ. ಆದ್ದರಿಂದ ತಂಝೀಮ್ ನನಗೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇತ್ತ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ವೈದ್ಯರೂ ಕೂಡ ತಂಝೀಮ್ ಮುಖಂಡರನ್ನು ಬೇಟಿಯಾಗಿ ತಮಗೆ ಬೆಂಬಲಿಸುವಂತೆ ಕೇಳಿಕೊಂಡಿದ್ದು ಈ ಕುರಿತು ಎಲ್ಲಿಯೂ ಬಹಿರಂಗ ಪಡಿಸಬೇಡಿ. ಒಂದು ವೇಳೆ ತಂಝೀಮ್ ಬಹಿರಂಗ ಬೆಂಬಲ ವ್ಯಕ್ತವಾದಲ್ಲಿ ಇಲ್ಲಿ ಹಿಂದೂ-ಮುಸ್ಲಿಮ್ ಎಂದು ಹೇಳಿಕೊಂಡು ಬಿಜೆಪಿ ಲಾಭ ಪಡೆದುಕೊಳ್ಳುತ್ತದೆ ಎಂದು ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಆದರೆ ತಂಜಿಮ್ ಸಹಾಯ ರೀತಿ ಮಾಡಲು ಒಪ್ಪುತದೇಯೋ ಕಾದು ನೋಡಬೇಕು.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನಾಮಧಾರಿ ಸಮಾಜದ ಮತಗಳಿದ್ದು ,ಎರಡನೆ ಸ್ಥಾನದಲ್ಲಿ ಮುಸ್ಲಿಮರ ಮತಗಳಿವೆ.
ಒಂದು ವೇಳೆ ಈ ಬಾರಿ ನಾಮಧಾರಿ ಹಾಗೂ ಮುಸ್ಲಿಮ್ ಸಮುದಾಯದ ಮತದಾರರು ಒಳಗೊಳಗೆ ಒಗ್ಗಟ್ಟಿನಿಂದ ಜೆ.ಡಿ.ಎಸ್. ಅಭ್ಯರ್ಥಿ ನಾಗೇಂದ್ರ ನಾಯ್ಕ ಅವರನ್ನು ಬೆಂಬಲಿಸಲು ನಿರ್ಧರಿಸಿದರೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಹೀನಾಯವಾಗಿ ಸೋಲನ್ನು ಅನುಭವಿಸಬೇಕಾಗಿ ಬರುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.ಹೀಗೆ ನಾಮಧಾರಿ ಸಮುದಾಯದ ಮತ್ತು ಮುಸ್ಲಿಂ ಸಮುದಾಯದ ಮತದಾರರು ಒಗ್ಗಟ್ಟಿನಿಂದ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ಅವರಿಗೆ ಮತ ಚಲಾಯಿಸಿದರೆ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಭಟ್ಕಳ ಕ್ಷೇತ್ರದ ಸಾಮಾನ್ಯ ಮತದಾರರ ಅಭಿಪ್ರಾಯವಾಗಿದೆ.