ತನ್ನ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಆತ್ಮಹತ್ಯೆ ಮಾಡಿಕೊಂಡಂತೆ ನಟಿಸಿ, ಅಧಿಕಾರಿಗಳಿಗೆ ತಲೆ ನೋವು ತಂದಿಟ್ಟ ಕುಮಟಾ ದ ಶ್ರೀಮತಿ ನಿವೇದಿತಾ ನಾಗರಾಜ್ ಭಂಡಾರಿ ಅರೆಸ್ಟ್
ಕುಮಟಾ- ಕಳೆದ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಹಾಗೆ ನಟಿಸಿ ಎಲ್ಲಾ ಅಧಿಕಾರಿಗಳಿಗೂ ಹಾಗೂ ಕುಟುಂಬಸ್ತರಿಗೂ ತಲೆ ನೋವುಂಟು ಮಾಡಿದ ಕುಮಟಾದ ಸಂತೆಗುಳಿಯ ತರಗೋಡು ನಿವಾಸಿ ನಿವೇದಿತಾ ನಾಗರಾಜ ಭಂಡಾರಿ ಗುಪ್ತ ಸ್ಥಳದಲ್ಲಿ ಪೊಲೀಸರು ಅರೆಸ್ಟ್ ಮಾಡಿ ಕರೆತಂದಿದ್ದಾರೆ. ಇವರು ತನ್ನ ಗಂಡನಿಗೆ ಬುದ್ದಿ ಕಲಿಸಲು ಕಳೆದ 4 ದಿನಗಳ ಹಿಂದೆ ತನ್ನ ಎರಡು ಗಂಡು ಮಕ್ಕಳೊಂದಿಗೆ ಕುಮಟಾದ ಪಿಕ್ಅಪ್ ಬಸ್ ಸ್ಟಾಂಡ್ ಬಳಿ ತನ್ನ ಬೈಕ್ ನಲ್ಲಿ ಕರೆದು ಕೊಂಡು ಬಂದು, ಮಕ್ಕಳನ್ನು ಬಸ್ ಸ್ಟಾಂಡ್ ಬಳಿ ನಿಲ್ಲಿಸಿ, ತನ್ನ ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ, ಬೈಕ್ ನಲ್ಲಿ ತೆರಳಿ ವನ್ನಳ್ಳಿಯ ಹೆಡ್ ಬಂದರ್ ಬೀಚ್ ಬಳಿ ತನ್ನ ಗಾಡಿಯಲ್ಲಿ ಮೊಬೈಲ್ ಹಾಗೂ ಬಂಗಾರವನ್ನು ಇಟ್ಟು , ಆತ್ಮಹತ್ಯೆ ಮಾಡಿಕೊಂಡಂತೆ ನಟಿಸಿ, ಅನುಮಾನ ಬರುವಂತೆ ಮಾಡಿ, ನಾಲ್ಕು ದಿನಗಳಿಂದ ತಲೆ ಮರೆಸಿಕೊಂಡು,ತಲೆನೋವಿಗೆ ಎಡೆ ಮಾಡಿಕೊಟ್ಟ ನಿವೇದಿತಾ ಭಂಡಾರಿಯನ್ನು ಗುಪ್ತಸ್ಥಳದಲ್ಲಿ ಪತ್ತೆ ಹಚ್ಚಿ ಬಂಧಿಸುವ ಮೂಲಕ ಪ್ರಕರಣ ಭೇದಿಸುವಲ್ಲಿ ಕುಮಟಾ ದ ಹೆಮ್ಮೆಯ ಪೊಲೀಸ್ ಅಧಿಕಾರಿಗಳಾದ ಸಿ. ಪಿ.ಐ. ತಿಮ್ಮಪ್ಪ ಸರ್, ಪಿ.ಎಸ್.ಐ ನವೀನ್ ನಾಯ್ಕ್ ಸರ್ , ಪಿ. ಎಸ್ ಐ ಇ. ಸಿ ಸಂಪತ್ ಸರ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸಫಲ ರಾಗಿದ್ದರೆ.