*ಶ್ರೀ ರಾಮನ ಆಗಮನದ ದಿನ ಉತ್ತರ ಕನ್ನಡದ ಭವಿಷ್ಯ ಬದಲಾಯಿಸುವ ದಿನವಾಗಲಿ :- ಅನಂತಮೂರ್ತಿ ಹೆಗಡೆ*
*ಭಟ್ಕಳ*:- ಇಂದು ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪುಣ್ಯದಿನ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಭವಿಷ್ಯ ಬದಲಾಯಿಸುವ ಪುಣ್ಯ ಈ ದಿನವಾಗಲಿ. ಭಟ್ಕಳದ ಶ್ರೀ ಕ್ಷೇತ್ರ ಕುದುರೆ ಬೀರಪ್ಪ ಮತ್ತು ಹನುಮಂತನ ಈ ಕ್ಷೇತ್ರ ಅತ್ಯಂತ ಪುಣ್ಯ ಕ್ಷೇತ್ರ, ಒಂದು ವೇಳೆ ದೇವರು ಬಿಜೆಪಿ ಪಕ್ಷದಿಂದ ಅವಕಾಶ ಕೊಡಿಸಿ ಉತ್ತರ ಕನ್ನಡ ಲೋಕಾಸಭಾ ಸದಸ್ಯನಾದರೆ ಮೊದಲನೆಯದಾಗಿ ಈ ದೇವಾಲಯವನ್ನು ಭವ್ಯ ದೇವಾಲಯ ಮಾಡುತ್ತೇನೆ ಎಂದು ಈ ವೇಳೆ ಪ್ರಮಾಣ ಮಾಡುತ್ತಿದ್ದೇನೆ ಎಂದು ಬಿಜೆಪಿ ಸದಸ್ಯ ಹಾಗೂ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಭಟ್ಕಳದ ಶ್ರೀ ಕುರುರೆಬೀರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ, ಮಾತನಾಡುತ್ತಾ, ನಾನು ಹಿಂದುತ್ವ ಮತ್ತು ಅಭಿವೃಧ್ದಿ ಎರಡನ್ನು ಒಟ್ಟಿಗೆ ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ. ಭಟ್ಕಳದ ಯುವಕರಿಗೆ, ಉದ್ಯೋಗ ಸಿಗುವ ಹಾಗೆ ಒಂದಷ್ಟು ಗಾರ್ಮೆಂಟ್ಸ್ ಗಳನ್ನು ಮಾಡಿಸಿ, ಇನ್ನೂ ಹಲವಾರು ಫ್ಯಾಕ್ಟರಿಗಳನ್ನು ನಿರ್ಮಿಸಿ ಉದ್ಯೋಗ ಅವಕಾಶಗಳನ್ನು ಜಾಸ್ತಿ ಮಾಡುತ್ತೇನೆ, ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಎಂದರು.
ದಿನದ 24 ಘಂಟೆ ಜಿಲ್ಲೆಯ ಜನರಿಗಾಗಿ ಕಸ್ಟಮರ್ ಕೇರ್ ಮತ್ತು ಮೊಬೈಲ್ ಆಪ್ಯ ಪ್ರಾರಂಭಿಸುತ್ತೇನೆ ,
ಜನರಿಗೆ ಏನೇ ಸಮಸ್ಯೆ, ಯಾವುದೇ ಸಂದರ್ಭದಲ್ಲೂ ಬಂದರೂ ಅವರು ಎಂ.ಪಿ. ಸಂಪರ್ಕ ಮಾಡಬಹುದು. ಅವರು ಏನೇ ಸಮಸ್ಯೆ ಇದ್ದರೂ ಸ್ಪಂದಿಸುತ್ತೇನೆ, ಈ ಯೋಚನೆ ದೇಶದಲ್ಲೇ ಪ್ರಥಮ, ಒಮ್ಮೆ ಅವಕಾಶ ಕೊಟ್ಟು ನೋಡಿರಿ. ಹಿಂದುತ್ವದ ಜೊತೆ ಜೊತೆಗೆ ಮೈಸೂರು, ಶಿವಮೊಗ್ಗ ಮಾದರಿಯನ್ನಿಟ್ಟುಕೊಂಡು ಅಭಿವೃದ್ಧಿ ಪರ್ವವನ್ನೇ ಹರಿಸೋಣ. ಜಿಲ್ಲೆಯ ಜನರ ಬದುಕನ್ನು ಬದಲಿಸೋಣ. ಇದು ನನ್ನ ಘೋಷಣೆ. ಭಟ್ಕಳದಲ್ಲಿ ಶ್ರೀ ಕ್ಷೇತ್ರ ಕುದುರೆಬೀರಪ್ಪ ಮತ್ತು ಹನುಮಂತ ದೇವರಲ್ಲಿ ಸಂಕಲ್ಪ ಮಾಡುತ್ತೇನೆ ಎಂದರು.