5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಪೊಲೀಸ ಹೆಡ್ ಕಾನ್ ಸ್ಟೇಬಲ್
ಮಯಾಕೊಂಡ: ಅಪಘಾತವಾಗಿದ್ದ ಬೈಕ್ ಬಿಡಲು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ಲಂಚ ಪಡೆಯುವಾಗ ಮಾಯಕೊಂಡ ಠಾಣೆ ಹೆಡ್ ಕಾನ್ ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣೆ ಮುಖ್ಯಪೇದೆ ಹೊನ್ನೂರಸ್ವಾಮಿ ಲೋಕಾಯುಕ್ತಕ್ಕೆ ಬಲೆಗೆ ಬುದ್ದವರು. ಜ.31ರಂದು ಅಪಘಾತಕ್ಕೀಡಾಗಿದ್ದ ಬೈಕ್ ಬಿಟ್ಟುಕೊಡಲು ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವರಿಗೆ ಹೆಡ್ ಕಾನ್ಸಟೇಬಲ್ ಹೊನ್ನೂರುಸ್ವಾಮಿ 6,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 1,000 ರೂ. ಹಣವನ್ನು ಮುಂಗಡವಾಗಿ ಪಡೆದುಕೊಂಡು, ಉಳಿದ 5,000 ರೂ. ಲಂಚದ ಹಣವನ್ನು ಶನಿವಾರ ತಂದುಕೊಡುವಂತೆ ತಿಳಿಸಿದ್ದರು.
ಮಾಯಕೊಂಡ ಪೊಲೀಸ್ ಠಾಣೆ ಹೊರಾವರಣದಲ್ಲಿ ಶನಿವಾರ ಚಂದ್ರಪ್ಪ ಬಳಿ 5,000 ರೂ. ಲಂಚದ ಹಣ ಪಡೆಯುವಾಗ ಹೊನ್ನೂರುಸ್ವಾಮಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಆರೋಪಿ ಹೊನ್ನೂರುಸ್ವಾಮಿ ಬಂಧಿಸಲಾಗಿದೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಸಿ.ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ ನೇತೃತ್ವದ ಸಿಬ್ಬಂದಿ ತಂಡ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.