ಮಂಗಳೂರಿನಲ್ಲಿ ಪಿಎಚ್ ಡಿ ಓದುತ್ತಿದ್ದ ಬ್ರಾಹ್ಮಣ ಯುವತಿ ನಾಪತ್ತೆ-ಅನ್ಯಕೋಮಿನ ಯುವಕನ ಜೊತೆ ತೆರಳಿರುವ ಶಂಕೆ.
ಮಂಗಳೂರು – ದೇರಳಕಟ್ಟೆಯಾ ಖಾಸಗಿ ಯೂನಿವರ್ಸಿಟಿ ಪಿಹೆಚ್ಡಿ ಅಧಯ್ಯನ ಮಾಡುತಿದ್ದ ಕೋಟೆಕಾರು ಬಳಿಯ ಪಿಜಿಯಲ್ಲಿದ್ದ ವಿದ್ಯಾರ್ಥಿನಿ ಚೈತ್ರಾ (27) ದಿಢೀರ್ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿನಿ ಪುತ್ತೂರು ಮೂಲದವಳಾಗಿದ್ದು, ನಾಪತ್ತೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿಯ ದೊಡ್ಡಪ್ಪ ದೂರು ನೀಡಿದ್ದಾರೆ. ಕಳೆದ ಮೂರು ದಿನದಿಂದ ಪತ್ತೆಯಾಗದ ಕಾರಣ ಮುಸ್ಲಿಂ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರು ನಗರದ ಕದ್ರಿಯಲ್ಲಿ ನೆಲೆಸಿರುವ ದೊಡ್ಡಪ್ಪನ ಆಶ್ರಯದಲ್ಲಿದ್ದ ಚೈತ್ರ ತಂದೆಯನ್ನು ಕಳೆದುಕೊಂಡಿದ್ದಳು, ವಿದ್ಯಾರ್ಥಿನಿ ಚೈತ್ರ ನೆಲೆಸಿದ್ದ ಪಿಜಿಗೆ ಮುಸ್ಲಿಂ ಯುವ ಪದೇ ಪದೇ ಬರುತಿದ್ದು ಆತ ಪಿಜಿ ಗೂ ಡ್ರಗ್ಸ್ ಸಪ್ಲೈ ಮಾಡುತಿದ್ದ ಎಂದು ತಿಳಿದು ಬಂದಿದೆ.
ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದಾಕೆ ನಾಪತ್ತೆಯಾಗಿದ್ದಾಳೆ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಚೈತ್ರಾಳ ದೊಡ್ಡಪ್ಪನಿಗೆ ವಿಷಯ ತಿಳಿಸಿದ್ದಾರೆ ,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಗೆ ಅದೇ ದಿನ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .