ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ಕರ್ನಾಟಕ ನೋಡೋಣ, ಕರುನಾಡು ಕಟ್ಟೋಣ 31 ಜಿಲ್ಲೆ 3000 ಕಿ.ಮೀ ಬೈಕ್ ಯಾತ್ರೆಗೆ ಅಂಕೋಲಾ ದಲ್ಲಿ ಸ್ವಾಗತಿಸಿದ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕ.
ಅಂಕೋಲಾ-ಕರ್ನಾಟಕ ನೋಡೋಣ, ಕರುನಾಡು ಕಟ್ಟೋಣ 31 ಜಿಲ್ಲೆ 3000 ಕಿ.ಮೀ ಪ್ರಯಾಣ, ಬುಲೆಟ್ ಏರಿ ಅಂಕೋಲಕ್ಕೆ ಬಂದು ತಲುಪಿದ ರವಿ ಕೃಷ್ಣಾ ರೆಡ್ಡಿ ರವರ್ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಶುಭ ಕೋರಿದ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕ.
ಕರ್ನಾಟಕ ನೋಡೋಣ, ಕರುನಾಡು ಕಟ್ಟೋಣ ಎಂಬ ಘೋಷಣೆಯೊಂದಿಗೆ 31 ಜಿಲ್ಲೆಗಳಲ್ಲಿ ಒಟ್ಟು 3000 ಕಿ.ಮೀ ದೂರ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಜೊತೆಗೆ ರವಿ ಕೃಷ್ಣಾರೆಡ್ಡಿ ಅವರು ಬುಲೆಟ್ ನಲ್ಲಿ ಪ್ರಯಾಣ ನಡೆಸುತ್ತಿದ್ದಾರೆ..
ಈ ಬೈಕ್ ರ್‍ಯಾಲಿ ಬೆಳಿಗ್ಗೆ 9 ಗಂಟೆಗೆ ಕರ್ನಾಟಕದ ಬಾರ್ಡೋಲಿ ಅಂಕೋಲಾ ಕ್ಕೆ ಬಂದು ತಲುಪಿತು.
ಬೈಕ್ ರಾಲಿ ಅಂಕೋಲಾ ದಲ್ಲಿ ಆಗಮಿಸುತ್ತಿದ್ದಂತೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸದಸ್ಯರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರಿಗೆ ಭೇಟಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಿಮ್ಮ ಪಕ್ಷಕ್ಕೆ ಶುಭವಾಗಲೆಂದು ಕೋರಿದರು … ಮುಂದುವರೆದು ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಅಗತ್ಯತೆ ಇದೆ . ಇಲ್ಲಿನ ರಾಜಕಾರಣಿಗಳು ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಮಾಡುವ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಇಲ್ಲ. ಎಲ್ಲದಕ್ಕೂ ರಾಜಕೀಯ ಮಾಡಿ ಅಭಿವೃದ್ಧಿಯನ್ನೇ ಕಡೆಗಣಿಸಿದ್ದಾರೆ.. ಕೆ ಆರ್ ಎಸ್ ಪಕ್ಷದ ಭ್ರಷ್ಟಾಚಾರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುತ್ತಿರುವುದು ನಮಗೆ ಸ್ಪೂರ್ತಿಯಾಗಿದೆ. ಈ ಬಗ್ಗೆ ನಿಮ್ಮ ಜೊತೆ ನಾವು ಕೂಡ ಕೈಜೋಡಿಸುತ್ತೇವೆ ಎಂದರು .
ಲೋಕಸಭೆ ಚುನಾವಣೆಗೆ ಇನ್ನೇನು ಮೂರು ತಿಂಗಳಷ್ಟೇ ಬಾಕಿ ಇದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಂತಹ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳು ಮುನ್ನಲೆಗೆ ಬರುತ್ತಿವೆ. ಅಭಿವೃದ್ದಿ, ಜನರ ಸಮಸ್ಯೆಗಳಿಗಿಂತ ಧರ್ಮ, ಜಾತಿ ವಿಚಾರಗಳೇ ಸುದ್ದಿಗಳೇ ಕೇಳಿ ಬರುತ್ತಿದೆ.
ಅಂಕೋಲದಲ್ಲಿ ರವಿ ಕೃಷ್ಣ ರೆಡ್ಡಿ ಅವರ ಮಾತು : ಭ್ರಷ್ಟ ರಾಷ್ಟ್ರೀಯ ಪಕ್ಷ ತಿರಸ್ಕಾರ ಮಾಡಿ ಕೆಆರ್ ಎಸ್ ಬೆಂಬಲಿಸಿ ಎಂದು ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಈ ಜಾಥಾ ಹಮ್ಮಿಕೊಂಡಿದ್ದೇವೆ. ರಾಜ್ಯದ ವಿವಿಧ ಕಡೆಗಳಲ್ಲಿ ಬುಲೆಟ್ ಮೂಲಕ ಸಂಚಾರ ಮಾಡಿ ಭಾಷಣ ಮಾಡುವ ಮೂಲಕ ಅರಿವು ಮೂಡಿಸುತ್ತೇವೆ. ಕರ್ನಾಟಕ ರಾಜಕೀಯ ಸಾಮಾಜಿಕ ಪರಿಸ್ಥಿತಿ ಏನು? ಕೆಆರ್ ಎಸ್ ಪಕ್ಷ ಏನು ಕೆಲಸ ಮಾಡಿದೆ ಎಂಬುವುದನ್ನು ಜನರಿಗೆ ತಿಳಿಸುತ್ತೇವೆ. ಮೂರು ರಾಷ್ಟ್ರೀಯ ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಅಕ್ರಮಗಳು, ಜನದ್ರೋಹಿ ಕಾರ್ಯಕ್ರಮಗಳನ್ನು ವಿರೋಧಿಸಿ ಜನಪರ ರಾಜಕೀಯ ಬೆಂಬಲಿಸಬೇಕು ಎಂಬುವುದು ನಮ್ಮ ಜಾಥಾ ಉದ್ದೇಶವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದ ಹಿತಾಸಕ್ತಿ ಬೇಕಿಲ್ಲ. ಕರ್ನಾಟಕದ ಜನರು ಯಾವ ರೀತಿಯಲ್ಲಿ ನಮ್ಮನ್ನು ಬೆಂಬಲಿಸಬೇಕು ಎಂದು ಜನ ಗಮನ ಸೆಳೆಯುವ ಅಭಿಯಾನ ಇದಾಗಿದೆ’ ಎಂದರು..
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಪ್ರಮುಖ ರಾಜ್ಯ ನಾಯಕರು.& ಜಿಲ್ಲಾ ನಾಯಕ ವಿನಾಯಕ ನಾಯ್ಕ್. ನೀಲಕಂಠ ನಾಯ್ಕ್.
ಮಾನವ ಹಕ್ಕುಗಳ ರಕ್ಷಣ ಪರಿಷತ್ನ ಪ್ರಮುಖ ಸದಸ್ಯರು .
ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.