ಕುಂದಾಪುರ ಓವರ್ ಬ್ರಿಡ್ಜ್ ನಿಂದ ಉರುಳಿದ ಕಾರು – ಒಬ್ಬರು ಮಹಿಳೆ ಸಾವು, ಇಬ್ಬರು ಸ್ಥಿತಿ ಗಂಭೀರ
ಕುಂದಾಪುರ : ಸ್ಥಳೀಯ ಬೊಬ್ಬರ್ಯನ ಕಟ್ಟೆ ಎದುರು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಮೇಲಿನಿಂದ ಸರ್ವಿಸ್ ರಸ್ತೆಗೆ ಅಪ್ಪಳಿಸಿದ ಕಾರಿನಲ್ಲಿದ್ದ ಮಹಿಳೆಯೋರ್ವರು ಸ್ಥಳದಲ್ಲಿಯೇ
ಸಾವಿಗೀಡಾದರೆ ಇಬ್ಬರು ಪುರುಷರನ್ನು ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಾಂಡಿಚೆರಿ ನೋಂದಣಿ ಹೊಂದಿರುವ ಈ ಕಾರಿನಲ್ಲಿ ಕೇರಳ ಮಾಣಿ ಮೂಲದ ಮುಸ್ಲಿಂ ಕುಟುಂಬ ವೊಂದು ಹೊನ್ನಾವರದ ಕಡೆಯಿಂದ ಕೇರಳ ದತ್ತ ಧಾವಿಸುತ್ತಿದ್ದು, ಕಾರಿನಲ್ಲಿ ಕೇರಳ ಮಾಣಿ ಮೂಲದ ಮುಸ್ಲಿಂ ಕುಟುಂಬ ರಮಝಾನ್ ಹಬ್ಬಕ್ಕಾಗಿ ಊರಿಗೆ ಪ್ರಯಾಣಿ ಸುತ್ತಿರುವಾಗ ಇಂದು ಮಧ್ಯಾಹ್ನ 1ಗಂಟೆಯ ಆಸುಪಾಸು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಹೆಚ್ಚಿನ ವಿವರ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.