ಕಾಂಗ್ರೆಸ್ ಸರ್ಕಾರದ ತೈಲ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಟ್ಕಳದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ್ ನೇತೃತ್ವದ ಲ್ಲಿ ಬಿಜೆಪಿ ವತಿಯಿಂದ ಬ್ರಹತ ಪ್ರತಿಭಟನೆ
ಭಟ್ಕಳ-ಭಟ್ಕಳದಲ್ಲಿ ಕಾಂಗ್ರೆಸ್ ಸರ್ಕಾರ ತೈಲ ದರ ಏರಿಕೆ ವಿರೋಧಿಸಿ
ಬಿಜೆಪಿ ತಾಲೂಕ ಘಟಕದಿಂದ ವತಿಯಿಂದ ಪ್ರತಿಭಟನೆ ನಡೆಸಿದರು.ಮಾಜಿ ಶಾಸಕ ಸುನೀಲ್ ನಾಯ್ಕ್ ಮಾತನಾಡಿ ಉಚಿತ ಭಾಗ್ಯಗಳ ಹೆಸರಲ್ಲಿ ಲೂಟಿ ಮಾಡಲು ಹೋರಾಟ ಕಾಂಗ್ರೆಸ್ ಸರ್ಕಾರವು ಆಡಳಿತ ನಡೆಸಲು ಸಾಧ್ಯವಾಗದೆ ಕರ್ನಾಟಕವನ್ನು ಶೋಚನೀಯ ಸ್ಥಿತಿಗೆ ತಂದಿದೆ. ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಬಡವನ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸರ್ಕಾರ ಈಗ ಮತ್ತೆ ತೈಲ ಬೆಲೆಯನ್ನು ಏರಿಸಿ ಈ ಮೂಲಕ ಇನ್ನೊಮ್ಮೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವಂತೆ ಮಾಡಿದೆ. ಈ ದುಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತದದಿಂದ ಜನ ಸಾಮಾನ್ಯರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಾಲ್ಕು ಚಕ್ರದ ವಾಹನಕ್ಕೆ ಬಳ್ಳಿ ಕಟ್ಟಿ ಏಳೆದುಕೊಂಡು ಹೋಗುವ ಮೂಲಕ ವಿನೂತನವಾಗಿ ಸರ್ಕಾರದ ಕಣ್ಣು ತೆರೆಸಲು ಬಡವರ ಮದ್ಯಮ ವರ್ಗದವರ ಪರವಾಗಿ ಪ್ರತಿಭಟನೆ ಮಾಡಲಾಯಿತು ಗುರುವಾರ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಗೋವಿಂದ ನಾಯ್ಕ, ಶಿವಾನಿ ಶಾಂತರಾಮ್, ಪ್ರಮೋದ್ ಜೋಶಿ, ಶ್ರೀಕಾಂತ್ ನಾಯ್ಕ್, ಪಾಂಡುರಂಗ ನಾಯ್ಕ್, ಬಿಜೆಪಿ ತಾಲೂಕ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ್, ಮಂಜಪ್ಪ ನಾಯ್ಕ್ ಮುರುಡೇಶ್ವರ ಮುಂತಾದವರು ಉಪಸ್ಥಿತರಿದ್ದರು.